ಯೆಹೋಶುವ 17:17

ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯಾಮನಿಗೂ ಮನಸ್ಸೆಗೂ--ನೀವು ಮಹಾ ಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವದು;

ಸಂದರ್ಭದೊಂದಿಗೆ ಓದಿ · ಯೆಹೋಶುವ 17

15ಅದಕ್ಕೆ ಯೆಹೋಶುವನು ಪ್ರತ್ಯುತ್ತರವಾಗಿ ಅವರಿಗೆ--ನೀನು ಮಹಾಜನಾಂಗವಾಗಿದ್ದು ನಿನಗೆ ಎಫ್ರಾಯಾಮಿನ ಪರ್ವತವು ಇಕ್ಕಟ್ಟಾಗಿದರೆ ನೀನು ಪೆರಿಜ್ಜೀಯರ ಮತ್ತು ರೆಫಾಯರ ದೇಶದಲ್ಲಿರುವ ಅಡವಿಗೆ ಹೋಗಿ ಅದನ್ನು ಕಡಿದು ನಿನಗೋಸ್ಕರ ಸ್ಥಳಮಾಡಿಕೋ, ಅಂದನು.

16ಅದಕ್ಕೆ ಯೋಸೇಫನ ಮಕ್ಕಳು--ಆ ಪರ್ವತವು ನಮಗೆ ಸಾಲದು. ಇದಲ್ಲದೆ ತಗ್ಗಿನ ಸೀಮೆಯಲ್ಲಿ ಇರುವ ಬೇತ್‌ಷೆಯಾನ್‌ನಲ್ಲಿಯೂ ಅದರ ಊರು ಗಳಲ್ಲಿಯೂ ಇಜ್ರೇಲಿನ ತಗ್ಗಿನಲ್ಲಿಯೂ ವಾಸಿಸಿರುವ ಸಮಸ್ತ ಕಾನಾನ್ಯರ ಬಳಿಯಲ್ಲಿ ಕಬ್ಬಿಣದ ರಥಗಳು ಉಂಟು ಅಂದರು.

17ಆಗ ಯೆಹೋಶುವನು ಯೋಸೇಫನ ಮಕ್ಕಳಾದ ಎಫ್ರಾಯಾಮನಿಗೂ ಮನಸ್ಸೆಗೂ--ನೀವು ಮಹಾ ಜನಾಂಗವೂ ಬಹು ಬಲವುಳ್ಳವರೂ ಆಗಿರುವಿರಿ. ಒಂದೇ ಭಾಗ ನಿಮಗೆ ಇರಬಾರದು. ಆದರೆ ಪರ್ವತವು ನಿಮ್ಮದಾಗಿರುವದು;

18ಅದು ಅಡವಿಯಾಗಿದೆ; ಅದನ್ನು ನೀವು ಕಡಿಯ ಬೇಕು. ಅದರ ಅಂತ್ಯಗಳ ವರೆಗೂ ನಿಮ್ಮದಾಗಿರುವದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿ ಬಿಡುವಿರಿ ಅಂದನು.

ಯೆಹೋಶುವ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी