೨ ಪೂರ್ವಕಾಲವೃತ್ತಾಂತ 10:3

ಅವರು ಅವನನ್ನು ಕರೇಕಳುಹಿಸಿದರು. ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲ್ಯರೂ ರೆಹಬ್ಬಾಮನ ಬಳಿಗೆ ಬಂದು

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 10

1ಆಗ ರೆಹಬ್ಬಾಮನು ಶೆಕೆಮಿಗೆ ಹೋದನು; ಅವನನ್ನು ಅರಸನಾಗಿ ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರು ಶೆಕೆಮಿಗೆ ಬಂದರು.

2ಅರಸ ನಾದ ಸೊಲೊಮೋನನ ಸಮ್ಮುಖದಿಂದ ಓಡಿಹೋಗಿ ಐಗುಪ್ತದಲ್ಲಿ ವಾಸವಾಗಿದ್ದು ಐಗುಪ್ತದಲ್ಲಿರುವ ನೆಬಾ ಟನ ಮಗನಾದ ಯಾರೊಬ್ಬಾಮನು ಇದನ್ನು ಕೇಳಿ ಐಗುಪ್ತದಿಂದ ತಿರಿಗಿ ಬಂದನು.

3ಅವರು ಅವನನ್ನು ಕರೇಕಳುಹಿಸಿದರು. ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲ್ಯರೂ ರೆಹಬ್ಬಾಮನ ಬಳಿಗೆ ಬಂದು

4ಅವನ ಸಂಗಡ ಮಾತನಾಡಿ--ನಿನ್ನ ತಂದೆಯು ನಮ್ಮ ನೊಗವನ್ನು ಕಠಿಣವಾಗಿ ಮಾಡಿದನು; ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ ಅವನು ನಮ್ಮ ಮೇಲೆ ಹಾಕಿದ ತನ್ನ ಭಾರವಾದ ನೊಗವನ್ನೂ ಹಗುರ ಮಾಡಿದರೆ ನಾವು ನಿನ್ನನ್ನು ಸೇವಿಸುವೆವು ಅಂದರು.

5ಅವನು ಅವರಿಗೆ--ಮೂರು ದಿವಸಗಳಾದ ತರುವಾಯ ತಿರಿಗಿ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದ್ದರಿಂದ ಜನರು ಹೊರಟುಹೋದರು.

೨ ಪೂರ್ವಕಾಲವೃತ್ತಾಂತ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी