ಯೆಹೆಜ್ಕೇಲನು 8:9

ಆಗ ಆತನು ನನಗೆ--ಒಳಗೆ ಹೋಗು; ಅವರು ಮಾಡುವ ಕೆಟ್ಟ ಅಸಹ್ಯಗಳನ್ನು ನೋಡು ಅಂದನು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 8

7ಆಗ ಅವನು ನನ್ನನ್ನು ಅಂಗಳದ ಬಾಗಲಿಗೆ ತಂದನು; ಮತ್ತು ನಾನು ನೋಡುವಾಗ ಇಗೋ, ಗೋಡೆಯಲ್ಲಿ ಒಂದು ರಂಧ್ರವನ್ನು ಕಂಡೆನು

8ಆಮೇಲೆ ಆತನು ನನಗೆ--ಮನುಷ್ಯಪುತ್ರನೇ, ಈಗ ಗೋಡೆಯಲ್ಲಿ ಕೊರೆ ಎಂದು ಹೇಳಿದನು. ಯಾವಾಗ ನಾನು ಗೋಡೆಯನ್ನು ಕೊರೆದೆನೋ ಒಂದು ಬಾಗಿಲು ಕಾಣಿಸಿತು.

9ಆಗ ಆತನು ನನಗೆ--ಒಳಗೆ ಹೋಗು; ಅವರು ಮಾಡುವ ಕೆಟ್ಟ ಅಸಹ್ಯಗಳನ್ನು ನೋಡು ಅಂದನು.

10ಹಾಗೆಯೇ ನಾನು ಒಳಗೆ ಹೋಗಿ ನೋಡಿದೆನು; ಇಗೋ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ ಅಸಹ್ಯ ಮೃಗಗಳೂ ಇಸ್ರಾಯೇಲ್ಯರು ಪೂಜಿಸುವ ಸಕಲ ಮೂರ್ತಿಗಳೂ ಈ ಗೋಡೆಯ ಸುತ್ತಲೂ ಚಿತ್ರಿಸ ಲ್ಪಟ್ಟಿವೆ.

11ಇದಲ್ಲದೆ ಇಸ್ರಾಯೇಲಿನ ಮನೆತನ ದವರಲ್ಲಿ ಎಪ್ಪತ್ತು ಮಂದಿಯೂ ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿ ದ್ದರು; ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾ ರತಿ ಇತ್ತು; ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು.

ಯೆಹೆಜ್ಕೇಲನು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी