ಈಗ ಅವಳ ತುಚ್ಛತನವನ್ನು ಅವಳ ಮಿಂಡರ ಕಣ್ಣುಗಳ ಮುಂದೆ ಬಯಲು ಪಡಿಸುವೆನು; ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು.
8ಅವರು ಬಾಳನಿಗಾಗಿ ಸಿದ್ಧಮಾಡಿದ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ನಾನು ಕೊಟ್ಟು ಅವ ಳಿಗೆ ಬೆಳ್ಳಿ ಬಂಗಾರವನ್ನು ನಾನೇ ಹೆಚ್ಚಿಸಿದ್ದೇನೆಂದು ಅವಳಿಗೆ ತಿಳಿಯಲಿಲ್ಲ.
9ಆದ್ದರಿಂದ ನಾನು ತಿರುಗಿ ಕೊಂಡು ನನ್ನ ಧಾನ್ಯವನ್ನು ಅದರ ಕಾಲದಲ್ಲಿಯೂ ನನ್ನ ದ್ರಾಕ್ಷಾರಸವನ್ನು ಅದರ ಸಮಯದಲ್ಲಿಯೂ ತೆಗೆದಹಾಗೆ ಅವಳ ಬೆತ್ತಲೆತನವನ್ನು ಮುಚ್ಚುವದ ಕ್ಕಿದ್ದ ನನ್ನ ಉಣ್ಣೆಯನ್ನೂ ನನ್ನ ನಾರು ಬಟ್ಟೆಯನ್ನೂ ತೆಗೆದುಕೊಳ್ಳುವೆನು.
10ಈಗ ಅವಳ ತುಚ್ಛತನವನ್ನು ಅವಳ ಮಿಂಡರ ಕಣ್ಣುಗಳ ಮುಂದೆ ಬಯಲು ಪಡಿಸುವೆನು; ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು.
11ನಾನು ಅವಳ ಉಲ್ಲಾಸವನ್ನೆಲ್ಲಾ ಅಂದರೆ ಅವಳ ಹಬ್ಬ ಅವಳ ಅಮಾವಾಸ್ಯೆ ಅವಳ ಸಬ್ಬತ್ತು ಅವಳ ಪರಿಶುದ್ಧ ಹಬ್ಬಗಳನ್ನೆಲ್ಲಾ ನಿಲ್ಲಿಸಿಬಿಡುವೆನು.
12ಮತ್ತು--ನನ್ನ ಮಿಂಡರಿಂದಾದ ಪ್ರತಿಫಲ ಇವುಗಳೇ ಎಂದು ಅವಳು ಹೇಳಿದ ಅವಳ ದ್ರಾಕ್ಷೇ ಬಳ್ಳಿಗಳನ್ನು ಅವಳ ಅಂಜೂರದ ಮರಗಳನ್ನು ನಾನು ಹಾಳುಮಾಡಿ ಅವುಗಳನ್ನು ಕಾಡನ್ನಾಗಿ ಮಾಡುವೆನು; ಅಡವಿಯ ಮೃಗಗಳು ಅವುಗಳನ್ನು ತಿನ್ನುವವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ