೨ ಪೂರ್ವಕಾಲವೃತ್ತಾಂತ 4:7

ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 4

5ಅವುಗಳ ಹಿಂಭಾಗಗಳೆಲ್ಲಾ ಒಳಗಾಗಿದ್ದವು. ಅದರ ದಪ್ಪವು ನಾಲ್ಕು ಬೆರಳಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು; ಅದು ಮೂರು ಸಾವಿರ ಕೊಳಗ ಹಿಡಿಯುವದಾಗಿತ್ತು.

6ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ ಅವುಗಳಲ್ಲಿ ದಹನಬಲಿಗೋಸ್ಕರ ಅರ್ಪಿಸು ವವುಗಳನ್ನು ತೊಳೆಯುವ ನಿಮಿತ್ತವಾಗಿ ಬಲಪಾರ್ಶ್ವ ದಲ್ಲಿ ಐದನ್ನೂ ಎಡಪಾರ್ಶ್ವದಲ್ಲಿ ಐದನ್ನೂ ಇರಿಸಿ ದನು. ಆದರೆ ಆ ಸಮುದ್ರವು ಯಾಜಕರಿಗೋಸ್ಕರ ತೊಳೆಯುವದಕ್ಕೆ ಇತ್ತು.

7ಅವುಗಳ ಮಾದರಿಯ ಪ್ರಕಾರವಾಗಿ ಹತ್ತು ಬಂಗಾರದ ದೀಪಸ್ತಂಭಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು.

8ಹಾಗೆಯೇ ಅವನು ಹತ್ತು ಮೇಜುಗಳನ್ನು ಮಾಡಿಸಿ ಮಂದಿರದಲ್ಲಿ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇರಿಸಿದನು. ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.

9ಇದ ಲ್ಲದೆ ಅವನು ಯಾಜಕರ ಅಂಗಳವನ್ನೂ ದೊಡ್ಡ ಅಂಗಳವನ್ನೂ ಅಂಗಳಗಳಿಗೋಸ್ಕರ ಬಾಗಲುಗಳನ್ನೂ ಮಾಡಿಸಿ

೨ ಪೂರ್ವಕಾಲವೃತ್ತಾಂತ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी