೧ ಅರಸುಗಳು 8:49

ಆಗ ನೀನು ಪರಲೋಕ ದಲ್ಲಿ, ನೀನು ವಾಸಮಾಡುವ ಸ್ಥಳದಲ್ಲಿ ಕೇಳಿ ಅವರ ನ್ಯಾಯವನ್ನು ತೀರಿಸಿ

ಸಂದರ್ಭದೊಂದಿಗೆ ಓದಿ · ೧ ಅರಸುಗಳು 8

47ಅವರು ಸೆರೆ ಒಯ್ಯಲ್ಪಟ್ಟ ದೇಶದಲ್ಲಿ ಪಶ್ಚಾತ್ತಾಪಪಟ್ಟು ತಿರುಗಿ ಕೊಂಡು ತಾವು ಪಾಪಮಾಡಿ ವಕ್ರಬುದ್ಧಿಯಿಂದ ನಡೆದು ದ್ರೋಹಮಾಡಿದೆವೆಂದು ತಮ್ಮನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿನಗೆ ವಿಜ್ಞಾಪನೆಮಾಡಿ ಅವರನ್ನು ಸೆರೆಯಾಗಿ ಒಯ್ದ ಶತ್ರುಗಳ ದೇಶದಲ್ಲಿ ತಮ್ಮ ಪೂರ್ಣಹೃದಯದಿಂದಲೂ

48ತಮ್ಮ ಪೂರ್ಣ ಪ್ರಾಣದಿಂದಲೂ ನಿನ್ನ ಕಡೆಗೆ ತಿರುಗಿಕೊಂಡು ನೀನು ಅವರ ಪಿತೃಗಳಿಗೆ ಕೊಟ್ಟ ತಮ್ಮ ದೇಶದ ಮಾರ್ಗ ವಾಗಿಯೂ ನೀನು ಆದುಕೊಂಡ ಪಟ್ಟಣದ ಮಾರ್ಗ ವಾಗಿಯೂ ನಿನ್ನ ಹೆಸರಿಗೋಸ್ಕರ ನಾನು ಕಟ್ಟಿಸಿದ ಈ ಮಂದಿರದ ಮಾರ್ಗವಾಗಿಯೂ ಅವರು ನಿನಗೆ ಪ್ರಾರ್ಥನೆ ಮಾಡಿದರೆ

49ಆಗ ನೀನು ಪರಲೋಕ ದಲ್ಲಿ, ನೀನು ವಾಸಮಾಡುವ ಸ್ಥಳದಲ್ಲಿ ಕೇಳಿ ಅವರ ನ್ಯಾಯವನ್ನು ತೀರಿಸಿ

50ನಿನಗೆ ವಿರೋಧವಾಗಿ ಮಾಡಿದ ನಿನ್ನ ಜನರ ಪಾಪಗಳನ್ನೂ ಅವರು ನಿನಗೆ ವಿರೋಧವಾಗಿ ಮಾಡಿದ ಅವರ ಸಮಸ್ತ ದ್ರೋಹ ಗಳನ್ನೂ ಮನ್ನಿಸಿ ಅವರನ್ನು ಕರುಣಿಸುವ ಹಾಗೆ ಅವರ ಮುಂದೆ ನೀನು ಅವರನ್ನು ಕರುಣಿಸು.

51ಅವರು ಐಗುಪ್ತದಿಂದಲೂ ಕಬ್ಬಿಣ ಕರಗಿಸುವ ಕುಲಿಮೆಯ ಮಧ್ಯದಿಂದಲೂ ನೀನು ಬರಮಾಡಿದ ನಿನ್ನ ಜನವಾ ಗಿಯೂ ನಿನ್ನ ಬಾಧ್ಯತೆಯಾಗಿಯೂ ಆಗಿದ್ದಾರೆ.

೧ ಅರಸುಗಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी