ಯೆಹೆಜ್ಕೇಲನು 44:12

ಅವರು ತಮ್ಮ ವಿಗ್ರ ಹಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾ ಯೇಲಿನ ಮನೆತನದವರಿಗೆ ಅಕ್ರಮದ ಆತಂಕವಾ ದದ್ದೇ ಕಾರಣ, ನಾನು ನನ್ನ ಕೈಯನ್ನು ಅವರಿಗೆ ವಿರುದ್ಧವಾಗಿ ಚಾಚಿದ್ದೇನೆ, ಅವರು ತಮ್ಮ ಅಕ್ರಮವನ್ನು ಹೊರುವರೆಂದು ದೇವರಾದ ಕರ್ತನು ಹೇಳುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 44

10ಇಸ್ರಾಯೇಲ್ಯರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿ ಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರು ಸಹ ತಮ್ಮ ಅಕ್ರಮಗಳನ್ನು ಹೊರುವರು.

11ಆದರೂ ಅವರು ನನ್ನ ಪರಿಶುದ್ಧ ಸ್ಥಳದಲ್ಲಿ ಸೇವಿ ಸುವವರಾಗಿರುವರು; ಆಲಯದ ಬಾಗಿಲುಗಳ ಮೇಲ್ವಿ ಚಾರವನ್ನು ಹೊಂದಿ ಆಲಯಕ್ಕೆ ಸೇವೆಮಾಡುವರು; ಅವರು ಜನರಿಗೋಸ್ಕರ ದಹನಬಲಿಯನ್ನು ಬಲಿ ಯನ್ನೂ ಮಾಡಿ ಅವರಿಗೆ ಸೇವೆಮಾಡುವ ಹಾಗೆ ಅವರ ಮುಂದೆ ನಿಲ್ಲುವರು.

12ಅವರು ತಮ್ಮ ವಿಗ್ರ ಹಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾ ಯೇಲಿನ ಮನೆತನದವರಿಗೆ ಅಕ್ರಮದ ಆತಂಕವಾ ದದ್ದೇ ಕಾರಣ, ನಾನು ನನ್ನ ಕೈಯನ್ನು ಅವರಿಗೆ ವಿರುದ್ಧವಾಗಿ ಚಾಚಿದ್ದೇನೆ, ಅವರು ತಮ್ಮ ಅಕ್ರಮವನ್ನು ಹೊರುವರೆಂದು ದೇವರಾದ ಕರ್ತನು ಹೇಳುತ್ತಾನೆ.

13ಅವರು ಯಾಜಕರಾಗಿ ನನ್ನನ್ನು ಸವಿಾಪಿಸದೆ ಅತಿ ಪರಿಶುದ್ಧ ಸ್ಥಳದಲ್ಲಿ ನನ್ನ ಪರಿಶುದ್ಧವಾದವುಗಳಲ್ಲಿ ಒಂದನ್ನಾದರೂ ಸವಿಾಪಿಸದೆ, ತಮ್ಮ ನಾಚಿಕೆಯನ್ನೂ ತಾವು ಮಾಡಿದ ಅಸಹ್ಯಗಳನ್ನೂ ಹೊರುವರು.

14ಆದರೆ ನಾನು ಅವರನ್ನು ಆಲಯದ ಎಲ್ಲಾ ಸೇವೆ ಗೋಸ್ಕರವೂ ಅದರಲ್ಲಿ ಮಾಡುವಂತ ಎಲ್ಲವುಗಳಿ ಗೋಸ್ಕರವೂ ಆಲಯದ ಕಾರ್ಯಗಳನ್ನು ನೋಡಿ ಕೊಳ್ಳುವವರನ್ನಾಗಿ ಮಾಡುವೆನು.

ಯೆಹೆಜ್ಕೇಲನು 44 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी