ಆ ದಿನದಲ್ಲಿ ಐಗುಪ್ತದ ನದಿಗಳ ಕಟ್ಟಕಡೆ ಯಿಂದ ನೊಣಕ್ಕೂ ಅಶ್ಯೂರ ದೇಶದ ಜೇನು ಹುಳಕ್ಕೂ ಕರ್ತನು ಸಿಳ್ಳುಹಾಕುವನು.
16ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವದಕ್ಕಿಂತ ಮುಂಚೆಯೇ ನೀನು ಹೇಸಿಕೊಳ್ಳುವ ದೇಶವನ್ನು ಅವಳ ಇಬ್ಬರು ಅರಸರು ತ್ಯಜಿಸಿಬಿಡುವರು.
17ಕರ್ತನು ನಿನ್ನ ಮೇಲೆ ಯೂ ನಿನ್ನ ಜನರ ಮೇಲೆಯೂ ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾ ಯಾಮು ಅಗಲಿದಂದಿನಿಂದ ಅಂದರೆ ಅಶ್ಯೂರ ಅರ ಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವನು.
18ಆ ದಿನದಲ್ಲಿ ಐಗುಪ್ತದ ನದಿಗಳ ಕಟ್ಟಕಡೆ ಯಿಂದ ನೊಣಕ್ಕೂ ಅಶ್ಯೂರ ದೇಶದ ಜೇನು ಹುಳಕ್ಕೂ ಕರ್ತನು ಸಿಳ್ಳುಹಾಕುವನು.
19ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವವು.
20ಅದೇ ದಿನದಲ್ಲಿ ಕರ್ತನು ನದಿಯ ಆಚೆಗಿರುವ ಅಶ್ಯೂರದ ರಾಜನೆಂಬವನಿಂದ ಬಾಡಿಗೆ ಕ್ಷೌರದ ಕತ್ತಿ ಯಿಂದ (ಯೆಹೂದದ) ತಲೆಯನ್ನು ಕಾಲುಕೂದ ಲನ್ನು ಬೋಳಿಸುವನು ಗಡ್ಡವನ್ನು ತೆಗೆದುಬಿಡುವನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ