ಅರಣ್ಯಕಾಂಡ 5:26

ಆಗ ಯಾಜಕನು ಕಾಣಿಕೆಯಿಂದ ಜ್ಞಾಪಕಭಾಗವಾಗಿ ಒಂದು ಹಿಡಿ ತಕ್ಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಸ್ತ್ರೀಗೆ ಆ ನೀರನ್ನು ಕುಡಿಸಬೇಕು.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 5

24ಆ ಸ್ತ್ರೀಗೆ ಶಪಿಸುವಂತ ಕಹಿಯಾದ ನೀರನ್ನು ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ಕಹಿಯಾಗುವದು.

25ಯಾಜಕನು ಆ ಸ್ತ್ರೀಯ ಕೈಯಿಂದ ರೋಷದ ಕಾಣಿಕೆಯನ್ನು ತಕ್ಕೊಂಡು ಆ ಕಾಣಿಕೆಯನ್ನು ಕರ್ತನ ಸಮ್ಮುಖದಲ್ಲಿ ಅಲ್ಲಾಡಿಸಿ ಬಲಿ ಪೀಠದ ಸವಿಾಪಕ್ಕೆ ತರಬೇಕು.

26ಆಗ ಯಾಜಕನು ಕಾಣಿಕೆಯಿಂದ ಜ್ಞಾಪಕಭಾಗವಾಗಿ ಒಂದು ಹಿಡಿ ತಕ್ಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಸ್ತ್ರೀಗೆ ಆ ನೀರನ್ನು ಕುಡಿಸಬೇಕು.

27ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ ಶಪಿಸುವ ನೀರು ಆಕೆ ಯೊಳಗೆ ಸೇರಿ ಕಹಿಯಾಗುವದು; ಅವಳ ಹೊಟ್ಟೆ ಉಬ್ಬಿ ತೊಡೆ ಕ್ಷೀಣವಾಗುವದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪವಾಗಿರುವಳು.

28ಆದರೆ ಆ ಸ್ತ್ರೀ ಅಶುದ್ಧಳಲ್ಲದೆ ಶುದ್ಧಳಾಗಿದ್ದರೆ ಅವಳು ನಿರಪರಾಧಿ ಯಾಗಿದ್ದು ಸಂತಾನವನ್ನು ಪಡೆಯುವಳು.

ಅರಣ್ಯಕಾಂಡ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी