ನಮ್ಮ ದೇವರು ಬರುತ್ತಾನೆ, ಮೌನವಾಗಿರನು; ಬೆಂಕಿಯು ಆತನ ಮುಂದೆ ದಹಿಸುವದು; ಅದು ಆತನ ಸುತ್ತಲು ದೊಡ್ಡ ಬಿರುಗಾಳಿಯಂತಿರುವದು.
1ಬಲಿಷ್ಠ ದೇವರಾಗಿರುವ ಕರ್ತನು ತಾನೇ ಮಾತನಾಡಿ ಸೂರ್ಯೋದಯದಿಂದ ಅಸ್ತಮಾನದ ವರೆಗೂ ಭೂನಿವಾಸಿಗಳನ್ನು ಕರೆದಿದ್ದಾನೆ.
2ಸೌಂದರ್ಯದ ಪರಿಪೂರ್ಣತೆಯಾದ ಚೀಯೋನಿ ನಿಂದ ದೇವರು ಪ್ರಕಾಶಿಸಿದ್ದಾನೆ.
3ನಮ್ಮ ದೇವರು ಬರುತ್ತಾನೆ, ಮೌನವಾಗಿರನು; ಬೆಂಕಿಯು ಆತನ ಮುಂದೆ ದಹಿಸುವದು; ಅದು ಆತನ ಸುತ್ತಲು ದೊಡ್ಡ ಬಿರುಗಾಳಿಯಂತಿರುವದು.
4ತನ್ನ ಜನರಿಗೆ ನ್ಯಾಯ ತೀರಿಸುವದಕ್ಕೆ ಮೇಲಿನಿಂದ ಆಕಾಶಗಳನ್ನೂ ಭೂಮಿ ಯನ್ನೂ ಕರೆಯುತ್ತಾನೆ.
5ಯಜ್ಞದಿಂದ ನನ್ನ ಸಂಗಡ ಒಡಂಬಡಿಕೆ ಮಾಡಿದ ನನ್ನ ಪರಿಶುದ್ಧರನ್ನು ನನ್ನ ಬಳಿಗೆ ಒಟ್ಟುಗೂಡಿಸಿರಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ