ಯಾಜಕಕಾಂಡ 20:25

ಆದದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಪಕ್ಷಿಗಳಿಂದಲೂ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮನ್ನು ಅಶುದ್ಧಮಾಡಿ ಕೊಳ್ಳಬಾರದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 20

23ನಾನು ನಿಮ್ಮೆದುರಿನಲ್ಲಿಯೇ ಹೊರಗೆ ಹಾಕಿದ ಜನಾಂಗಗಳಂತೆ ನೀವು ನಡೆಯಬಾರದು; ಅವರು ಇಂಥವುಗಳನ್ನೆಲ್ಲಾ ಮಾಡಿದ್ದಾರೆ; ಆದಕಾರಣ ನಾನು ಅವರನ್ನು ಅಸಹ್ಯಿಸಿಕೊಂಡಿದ್ದೇನೆ.

24ನಾನು ನಿಮಗೆ ಹೇಳಿದ್ದೇನಂದರೆ--ನೀವು ಅವರ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವಿರಿ. ಹಾಲೂ ಜೇನೂ ಹರಿಯುವ ಆ ದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳುವಂತೆ ನಾನು ಅದನ್ನು ನಿಮಗೆ ಕೊಡುತ್ತೇನೆ. ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಪಡಿಸಿದಂಥ ನಿಮ್ಮ ದೇವರಾಗಿರುವ ಕರ್ತನು ನಾನೇ.

25ಆದದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಪಕ್ಷಿಗಳಿಂದಲೂ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮನ್ನು ಅಶುದ್ಧಮಾಡಿ ಕೊಳ್ಳಬಾರದು.

26ನೀವು ನನ್ನವರಾಗಿರುವಂತೆ ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಿಸಿದ್ದ ಕರ್ತನಾದ ನಾನು ಪರಿಶುದ್ಧನಾಗಿರುವದರಿಂದ ನೀವು ನನಗೆ ಪರಿಶುದ್ಧ ರಾಗಿರಬೇಕು.

27ಮನುಷ್ಯನಾಗಲಿ ಸ್ತ್ರೀಯಾಗಲಿ ಮಂತ್ರವಾದಿ ಇಲ್ಲವೆ ಮಾಟಗಾರರಾಗಿರುವದಾಗಿದ್ದರೆ ಅವರನ್ನು ನಿಶ್ಚಯವಾಗಿ ಕಲ್ಲೆಸೆದು ಕೊಲ್ಲಬೇಕು; ಅವರ ರಕ್ತವು ಅವರ ಮೇಲೆ ಇರುವದು.

ಯಾಜಕಕಾಂಡ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी