೨ ಸಮುವೇಲನು 12:7

ಆಗ ನಾತಾನನು ದಾವೀದನಿಗೆ--ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು--ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 12

5ಆಗ ದಾವೀದನು ಆ ಮನುಷ್ಯನ ಮೇಲೆ ಬಹಳ ಕೋಪಿಸಿಕೊಂಡು ನಾತಾನನಿಗೆ--ಕರ್ತನ ಜೀವದಾಣೆ, ಇದನ್ನು ಮಾಡಿದ ಆ ಮನುಷ್ಯನು ನಿಜವಾಗಿಯೂ ಸಾಯಬೇಕು.

6ಅವನು ಕರುಣೆ ಯಿಲ್ಲದೆ ಈ ಕಾರ್ಯವನ್ನು ಮಾಡಿದ್ದರಿಂದ ಆ ಕುರಿ ಗೋಸ್ಕರ ನಾಲ್ಕರಷ್ಟು ತಿರಿಗಿ ಕೊಡಬೇಕು ಅಂದನು.

7ಆಗ ನಾತಾನನು ದಾವೀದನಿಗೆ--ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು--ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು

8ನಿನ್ನ ಯಜಮಾನನ ಮನೆಯನ್ನೂ ನಿನ್ನ ಯಜಮಾನನ ಹೆಂಡತಿಯರನ್ನೂ ನಿನ್ನ ಎದೆಗೆ ಕೊಟ್ಟು ಇಸ್ರಾಯೇಲಿನ ಮನೆಯನ್ನೂ ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು.

9ಇದು ಸಾಲದೆ ಇದ್ದರೆ ಇಂಥಿಂಥವುಗಳನ್ನು ನಿನಗೆ ಇನ್ನೂ ಕೊಡುತ್ತಿದ್ದೆನು. ನೀನು ಕರ್ತನ ದೃಷ್ಟಿಗೆ ಈ ಕೆಟ್ಟಕಾರ್ಯವನ್ನು ಮಾಡುವ ಹಾಗೆ ಆತನ ಆಜ್ಞೆ ಯನ್ನು ತಿರಸ್ಕರಿಸಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿ ಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡಿ; ಇದಲ್ಲದೆ ಅವನನ್ನು ಅಮ್ಮೋನನ ಮಕ್ಕಳ ಕತ್ತಿಯಿಂದ ಕೊಂದು ಹಾಕಿಸಿದಿ.

೨ ಸಮುವೇಲನು 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी