ಯೆಶಾಯ 57:11

ನೀನು ಸುಳ್ಳು ಹೇಳಿ ನನ್ನನ್ನು ಜ್ಞಾಪಕ ಮಾಡದೆ ಇಲ್ಲವೆ ಅದನ್ನು ಮನಸ್ಸಿಗೆ ತಾರದೆ ಇರುವಾಗ ಯಾರಿಗೆ ಅಂಜಿಕೊಂಡು ಭಯಪಟ್ಟಿ?

ಸಂದರ್ಭದೊಂದಿಗೆ ಓದಿ · ಯೆಶಾಯ 57

9ಬಹು ಸುಗಂಧ ದ್ರವ್ಯಗಳನ್ನು ಕೂಡಿಸಿ, ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ, ದೂರಕ್ಕೆ ನಿನ್ನ ಸೇವಕರನ್ನು ಕಳುಹಿಸಿದ್ದೀ, ಪಾತಾಳ ದಷ್ಟು ನೀಚಸ್ಥಿತಿಗೆ ಇಳಿದಿದ್ದೀ.

10ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ ನಿರೀಕ್ಷೆಯೇ ಇಲ್ಲ ಎಂದು ಅಂದುಕೊಳ್ಳಲಿಲ್ಲ. ನಿನ್ನ ಕೈಯಲ್ಲಿರುವ ಜೀವವನ್ನು ಕಂಡುಕೊಂಡಿದ್ದೀ, ಆದದರಿಂದ ನೀನು ದುಃಖಿಸಲಿಲ್ಲ.

11ನೀನು ಸುಳ್ಳು ಹೇಳಿ ನನ್ನನ್ನು ಜ್ಞಾಪಕ ಮಾಡದೆ ಇಲ್ಲವೆ ಅದನ್ನು ಮನಸ್ಸಿಗೆ ತಾರದೆ ಇರುವಾಗ ಯಾರಿಗೆ ಅಂಜಿಕೊಂಡು ಭಯಪಟ್ಟಿ?

12ನಾನೇ ನಿನ್ನ ನೀತಿಯನ್ನೂ ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. ಅವು ನಿನಗೆ ಪ್ರಯೋಜನವಾಗು ವದಿಲ್ಲ.

13ನೀನು ಕೂಗುವಾಗ ನಿನ್ನ ವಿಗ್ರಹಗಳು ನಿನ್ನನ್ನು ತಪ್ಪಿಸಲಿ; ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವದು; ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವದು; ಆದರೆ ನನ್ನಲ್ಲಿ ನಂಬಿಕೆ ಇಡುವವನು ದೇಶವನ್ನು ವಶಮಾಡಿ ಕೊಂಡು ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.

ಯೆಶಾಯ 57 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी