ಯೆಹೆಜ್ಕೇಲನು 43:22

ಎರಡನೇ ದಿನದಲ್ಲಿ ದೋಷವಿಲ್ಲದ ಮೇಕೆಯ ಮರಿಯನ್ನೂ ಪಾಪ ಬಲಿಯಾಗಿ ಅರ್ಪಿಸ ಬೇಕು; ಅವರು ಯಜ್ಞವೇದಿಯನ್ನು ಹೋರಿಯಿಂದ ಶುದ್ಧಮಾಡಿದ ಹಾಗೆ ಶುದ್ಧಮಾಡಬೇಕು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 43

20ಅದರ ರಕ್ತವನ್ನು ತೆಗೆದುಕೊಂಡು ಅದರ ನಾಲ್ಕು ಕೊಂಬುಗಳ ಅಂಚಿನ ನಾಲ್ಕು ಮೂಲೆಗಳಿಗೂ ಸುತ್ತಲೂ ಹಚ್ಚಿ ಶುದ್ಧಪಡಿಸಿ ದೋಷ ಪರಿಹರಿಸಬೇಕು.

21ಇದಲ್ಲದೆ ನೀನು ಹೋರಿ ಯನ್ನು ಸಹ ಪಾಪದ ಅರ್ಪಣೆಗೆ ತೆಗೆದುಕೊಂಡು ಆಲಯದ ನೇಮಕವಾದ ಪರಿಶುದ್ಧ ಸ್ಥಳದಲ್ಲಿ ಹೊರಗೆ ಸುಡಬೇಕು.

22ಎರಡನೇ ದಿನದಲ್ಲಿ ದೋಷವಿಲ್ಲದ ಮೇಕೆಯ ಮರಿಯನ್ನೂ ಪಾಪ ಬಲಿಯಾಗಿ ಅರ್ಪಿಸ ಬೇಕು; ಅವರು ಯಜ್ಞವೇದಿಯನ್ನು ಹೋರಿಯಿಂದ ಶುದ್ಧಮಾಡಿದ ಹಾಗೆ ಶುದ್ಧಮಾಡಬೇಕು.

23ಹೀಗೆ ಅವರು ಶುದ್ಧ ಮಾಡಿದಾಗ ಕೊನೆಯಲ್ಲಿ ದೋಷ ವಿಲ್ಲದ ಒಂದು ಪ್ರಾಯದ ಹೋರಿಯನ್ನೂ ಪೂರ್ಣಾಂಗವಾದ ಮಂದೆಯೊಳಗಿರುವ ಒಂದು ಟಗರನ್ನೂ ಅರ್ಪಿಸಬೇಕು.

24ನೀನು ಅವುಗಳನ್ನು ಕರ್ತನ ಮುಂದೆ ಅರ್ಪಿಸಬೇಕು; ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ ಅವುಗಳನ್ನು ಕರ್ತನಿಗೆ ದಹನಬಲಿಯಾಗಿ ಅರ್ಪಿಸಬೇಕು.

ಯೆಹೆಜ್ಕೇಲನು 43 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी