೧ ಸಮುವೇಲನು 3:10

ಆಗ ಕರ್ತನು ಬಂದು ನಿಂತು ಮೊದಲಿನ ಹಾಗೆಯೇಸಮುವೇಲನೇ, ಸಮುವೇಲನೇ ಎಂದು ಕರೆದನು. ಅದಕ್ಕೆ ಸಮುವೇಲನು--ಮಾತನಾಡು; ನಿನ್ನ ದಾಸನು ಕೇಳುತ್ತಾನೆ ಅಂದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 3

8ಕರ್ತನು ಮತ್ತೆ ಮೂರನೇ ಸಾರಿ--ಸಮುವೇಲನೇ ಎಂದು ಕರೆದನು. ಅವನು ಎದ್ದು ಏಲಿಯ ಬಳಿಗೆ ಹೋಗಿ--ಇಗೋ, ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು. ಆಗ ಕರ್ತನು ಹುಡುಗನನ್ನು ಕರೆಯುತ್ತಾನೆಂದು ಏಲಿಯು ಗ್ರಹಿಸಿಕೊಂಡನು.

9ಏಲಿಯು ಸಮುವೇಲ ನಿಗೆ--ಹೋಗಿ ಮಲಗು; ಆತನು ನಿನ್ನನ್ನು ಕರೆದಾಗ ನೀನು--ಕರ್ತನೇ, ಮಾತನಾಡು; ನಿನ್ನ ದಾಸನು ಕೇಳು ತ್ತಾನೆ ಎಂದು ಹೇಳು ಅಂದನು. ಹಾಗೆಯೇ ಸಮು ವೇಲನು ಹೋಗಿ ತನ್ನ ಸ್ಥಳದಲ್ಲಿ ಮಲಗಿದನು.

10ಆಗ ಕರ್ತನು ಬಂದು ನಿಂತು ಮೊದಲಿನ ಹಾಗೆಯೇಸಮುವೇಲನೇ, ಸಮುವೇಲನೇ ಎಂದು ಕರೆದನು. ಅದಕ್ಕೆ ಸಮುವೇಲನು--ಮಾತನಾಡು; ನಿನ್ನ ದಾಸನು ಕೇಳುತ್ತಾನೆ ಅಂದನು.

11ಕರ್ತನು ಸಮುವೇಲನಿಗೆ ಹೇಳಿದ್ದೇನಂದರೆ--ಇಗೋ, ನಾನು ಇಸ್ರಾಯೇಲಿನಲ್ಲಿ ಒಂದು ಕಾರ್ಯ ವನ್ನು ಮಾಡುವೆನು; ಅದನ್ನು ಕೇಳುವವನ ಎರಡು ಕಿವಿಗಳೂ ಘಣಘಣಿಸುವವು;

12ನಾನು ಏಲಿಯ ಮನೆಯನ್ನು ಕುರಿತು ಹೇಳಿದ್ದನ್ನೆಲ್ಲಾ ಅವರಿಗೆ ಆ ದಿವಸದಲ್ಲಿ ಮಾಡುತ್ತೇನೆ; ನಾನು ಆರಂಭಿಸಿದ ಹಾಗೆ ಅಂತ್ಯ ವನ್ನು ಮಾಡುವೆನು.

೧ ಸಮುವೇಲನು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी