ಯೆಹೋಶುವ 1:16

ಆಗ ಅವರು ಯೆಹೋಶು ವನಿಗೆ ಪ್ರತ್ಯುತ್ತರವಾಗಿ--ನೀನು ನಮಗೆ ಆಜ್ಞಾಪಿಸು ವದನ್ನೆಲ್ಲಾ ಮಾಡುವೆವು; ಎಲ್ಲಿಗೆ ಕಳುಹಿಸುತ್ತೀಯೋ ಅಲ್ಲಿಗೆ ಹೋಗುವೆವು.

ಸಂದರ್ಭದೊಂದಿಗೆ ಓದಿ · ಯೆಹೋಶುವ 1

14ಹೇಗಂದರೆ ನಿಮ್ಮ ಹೆಂಡತಿಯರೂ ಚಿಕ್ಕವರೂ ಪಶುಗಳೂ ಮೋಶೆ ನಿಮಗೆ ಕೊಟ್ಟ ಯೊರ್ದನಿಗೆ ಈಚೆ ಇರುವ ದೇಶದಲ್ಲೇ ಇರಲಿ; ಆದರೆ ನಿಮ್ಮಲ್ಲಿ ಇರುವ ಪರಾಕ್ರಮಶಾಲಿಗಳೆಲ್ಲಾ ನಿಮ್ಮ ಸಹೋದರರ ಮುಂದೆ ಯುದ್ಧಸನ್ನದ್ಧರಾಗಿ ನಡೆದುಹೋಗಿ

15ಕರ್ತನು ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನು ವಿಶ್ರಾಂತಿ ಪಡಿಸಿ ಅವರು ನಿಮ್ಮ ದೇವರಾದ ಕರ್ತನು ತಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವ ವರೆಗೆ ಅವರಿಗೆ ಸಹಾಯ ಮಾಡಿರಿ; ತರುವಾಯ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಈಚೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ನಿಮಗೆ ಕೊಟ್ಟ ನಿಮ್ಮ ಸ್ವಾಸ್ತ್ಯವಾದ ದೇಶಕ್ಕೆ ತಿರಿಗಿ ಬಂದು ಅದನ್ನು ಅನುಭವಿಸಿರಿ ಅಂದನು.

16ಆಗ ಅವರು ಯೆಹೋಶು ವನಿಗೆ ಪ್ರತ್ಯುತ್ತರವಾಗಿ--ನೀನು ನಮಗೆ ಆಜ್ಞಾಪಿಸು ವದನ್ನೆಲ್ಲಾ ಮಾಡುವೆವು; ಎಲ್ಲಿಗೆ ಕಳುಹಿಸುತ್ತೀಯೋ ಅಲ್ಲಿಗೆ ಹೋಗುವೆವು.

17ನಾವು ಎಲ್ಲಾದರಲ್ಲಿ ಮೋಶೆಯ ಮಾತು ಕೇಳಿದ ಹಾಗೆ ನಿನ್ನ ಮಾತನ್ನೂ ಕೇಳುವೆವು. ಆದರೆ ನಿನ್ನ ದೇವರಾದ ಕರ್ತನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡವೂ ಇರಲಿ.

18ನೀನು ಆಜ್ಞಾಪಿಸುವ ಎಲ್ಲಾದರಲ್ಲಿ ನಿನ್ನ ಮಾತುಗಳನ್ನು ಕೇಳದೆ ನಿನ್ನ ಬಾಯಿಮಾತಿಗೆ ಎದುರು ಬೀಳುವವನು ಸಾಯಲೇಬೇಕು; ಆದರೆ ನೀನು ಮಾತ್ರ ಬಲವಾಗಿರು, ಒಳ್ಳೆ ಧೈರ್ಯದಿಂದಿರು ಅಂದರು.

ಯೆಹೋಶುವ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी