ಯಾಜಕಕಾಂಡ 8:32

ಮಾಂಸದಲ್ಲಿಯೂ ರೊಟ್ಟಿಯಲ್ಲಿಯೂ ಉಳಿದದ್ದನ್ನು ನೀವು ಬೆಂಕಿಯಿಂದಸುಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 8

30ಮೋಶೆಯು ಅಭಿಷೇಕ ತೈಲವನ್ನೂ ಯಜ್ಞ ವೇದಿಯ ಮೇಲಿರುವ ರಕ್ತವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ಉಡುಪುಗಳ ಮೇಲೆ ಯೂ ಅವನೊಂದಿಗೆ ಅವನ ಕುಮಾರರ ಮೇಲೆಯೂ ಅವರ ಉಡುಪುಗಳ ಮೇಲೆಯೂ ಚಿಮುಕಿಸಿದನು ಮತ್ತು ಆರೋನನನ್ನೂ ಅವನ ಉಡುಪುಗಳನ್ನೂ ಅವನೊಂದಿಗೆ ಅವನ ಕುಮಾರರನ್ನೂ ಅವರ ಉಡುಪು ಗಳನ್ನೂ ಪವಿತ್ರಮಾಡಿದನು.

31ಮೋಶೆಯು ಆರೋನನಿಗೂ ಅವನ ಕುಮಾರರಿಗೂ--ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಆ ಮಾಂಸವನ್ನು ಬೇಯಿಸಿರಿ; ಅದನ್ನು ಪ್ರತಿಷ್ಠಿತ ಬುಟ್ಟಿ ಯೊಳಗಿರುವ ರೊಟ್ಟಿಯೊಡನೆ ತಿನ್ನಬೇಕು; ನಾನು ಆಜ್ಞಾಪಿಸಿ ಹೇಳಿದಂತೆ ಆರೋನನೂ ಅವನ ಕುಮಾ ರರೂ ಅದನ್ನು ತಿನ್ನಬೇಕು.

32ಮಾಂಸದಲ್ಲಿಯೂ ರೊಟ್ಟಿಯಲ್ಲಿಯೂ ಉಳಿದದ್ದನ್ನು ನೀವು ಬೆಂಕಿಯಿಂದಸುಡಬೇಕು.

33ಇದಲ್ಲದೆ ನಿಮ್ಮ ಪ್ರತಿಷ್ಠೆಯ ದಿನದ ಕೊನೆಯ ವರೆಗೆ ಅಂದರೆ ಏಳು ದಿವಸಗಳ ವರೆಗೆ ನೀವು ಸಭೆಯ ಗುಡಾರದ ಬಾಗಲಿನಿಂದ ಹೊರಗೆ ಹೋಗಬಾರದು; ಆತನು ನಿಮ್ಮನ್ನು ಏಳು ದಿವಸಗಳ ವರೆಗೆ ಪ್ರತಿಷ್ಠಿಸುವನು.

34ಈ ದಿನದಲ್ಲಿ ಅವನು ಮಾಡಿದ ಹಾಗೆ ಪಾಪ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಕರ್ತನು ಆಜ್ಞಾಪಿಸಿದ್ದಾನೆ.

ಯಾಜಕಕಾಂಡ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी