ಎಸ್ತೇರಳು 1:12

ಆದರೆ ಅರಸನು ಅಧಿಕಾರಿ ಗಳಿಂದ ಹೇಳಿ ಕಳುಹಿಸಿದ ಮಾತಿಗೆ ರಾಣಿಯಾದ ವಷ್ಟಿಯು -- ನಾನು ಬರುವದಿಲ್ಲವೆಂದು ಹೇಳಿದಳು. ಆದದರಿಂದ ಅರಸನು ಬಹು ಕೋಪಗೊಂಡು ಉಗ್ರತೆಯಿಂದ ಉರಿದನು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 1

10ಏಳನೇ ದಿವಸದಲ್ಲಿ ಅರಸನು ದ್ರಾಕ್ಷಾರಸದಿಂದ ಮನಸ್ಸಂತೋಷವಾಗಿರುವಾಗ ರಾಣಿಯಾದ ವಷ್ಟಿಯು ಬಹು ರೂಪವತಿಯಾದ್ದದರಿಂದ ಜನರಿಗೂ ಪ್ರಧಾ ನರಿಗೂ ಅವಳ ಸೌಂದರ್ಯವನ್ನು ತೋರಿಸುವದಕ್ಕೆ ರಾಣಿಗೆ ರಾಜ ಕಿರೀಟವನ್ನು ಧರಿಸಿ ಅರಸನ ಮುಂದೆ ಕರಕೊಂಡು ಬರುವದಕ್ಕೆ

11ಅರಸನಾದ ಅಹಷ್ವೇ ರೋಷನ ಸಮ್ಮುಖದಲ್ಲಿ ಸೇವಿಸುವ ಮೆಹೂಮಾನನು ಬಿಜೆತಾನು ಹರ್ಬೋನಾನು ಬಿಗೆತಾನು ಅಬಗೆತಾನು ಜೇತರನು ಕರ್ಕಸನು ಎಂಬ ಏಳು ಮಂದಿ ಅಧಿಕಾರಿ ಗಳಿಗೆ ಹೇಳಿದನು.

12ಆದರೆ ಅರಸನು ಅಧಿಕಾರಿ ಗಳಿಂದ ಹೇಳಿ ಕಳುಹಿಸಿದ ಮಾತಿಗೆ ರಾಣಿಯಾದ ವಷ್ಟಿಯು -- ನಾನು ಬರುವದಿಲ್ಲವೆಂದು ಹೇಳಿದಳು. ಆದದರಿಂದ ಅರಸನು ಬಹು ಕೋಪಗೊಂಡು ಉಗ್ರತೆಯಿಂದ ಉರಿದನು.

13ಆಗ ನೀತಿ ನ್ಯಾಯಗಳನ್ನು ತಿಳಿದವರೆಲ್ಲರಿಗೂ ಅರಸನ ರೀತಿಯ ಪ್ರಕಾರವಾಗಿ ಅರಸನು ಕಾಲ ಜ್ಞಾನಿಗಳ ಸಂಗಡಲೂ

14ರಾಜ್ಯದಲ್ಲಿ ಶ್ರೇಷ್ಠರಾಗಿ ಕುಳಿತುಕೊಂಡು ಅರಸನ ಮುಖವನ್ನು ನೋಡುತ್ತಿರುವ ಪಾರಸಿಯ ಮೇಧ್ಯಗಳ ಏಳುಮಂದಿ ಪ್ರಧಾನರಾದ ಕರ್ಷೆನಾ, ಶೇತಾರ್‌, ಆದ್ಮಾತನು, ತರ್ಷೀಷನು.

ಎಸ್ತೇರಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी