ಯೆಶಾಯ 1:2

ಓ ಆಕಾಶ ಗಳೇ, ಕೇಳಿರಿ; ಓ ಭೂಮಿಯೇ, ಕಿವಿಗೊಡು; ಕರ್ತನು ಮಾತನಾಡುತ್ತಿದ್ದಾನೆ: ನಾನು ಸಾಕಿ ಸಲಹಿದ ಮಕ್ಕಳೇ, ನನಗೆ ವಿರೋಧವಾಗಿ ಎದುರುಬಿದ್ದಿದ್ದಾರೆ.

ಸಂದರ್ಭದೊಂದಿಗೆ ಓದಿ · ಯೆಶಾಯ 1

1ಯೆಹೂದ ದೇಶದ ಅರಸರುಗಳಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗ ನಾದ ಯೆಶಾಯನಿಗಾದ ದರ್ಶನವು.

2ಓ ಆಕಾಶ ಗಳೇ, ಕೇಳಿರಿ; ಓ ಭೂಮಿಯೇ, ಕಿವಿಗೊಡು; ಕರ್ತನು ಮಾತನಾಡುತ್ತಿದ್ದಾನೆ: ನಾನು ಸಾಕಿ ಸಲಹಿದ ಮಕ್ಕಳೇ, ನನಗೆ ವಿರೋಧವಾಗಿ ಎದುರುಬಿದ್ದಿದ್ದಾರೆ.

3ಎತ್ತು ತನ್ನ ಯಜಮಾನನನ್ನು ಮತ್ತು ಕತ್ತೆಯು ತನ್ನ ಒಡೆ ಯನ ಕೊಟ್ಟಿಗೆಯನ್ನು ತಿಳಿದಿರುವವು; ಆದರೆ ಇಸ್ರಾ ಯೇಲಿಗೆ ತಿಳಿದಿಲ್ಲ; ನನ್ನ ಜನರು ಆಲೋಚಿಸುವ ದಿಲ್ಲ.

4ಹಾ, ಪಾಪಿಷ್ಠ ಜನಾಂಗವೇ, ದುಷ್ಟತನದ ಭಾರವನ್ನು ಹೊತ್ತಿರುವ ಪ್ರಜೆಯೇ, ದುಷ್ಟಸಂತ ತಿಯೇ, ಭ್ರಷ್ಟರಾದ ಮಕ್ಕಳೇ, ಕರ್ತನನ್ನು ಅವರು ತೊರೆದುಬಿಟ್ಟಿದ್ದಾರೆ. ಇಸ್ರಾಯೇಲಿನ ಪರಿಶುದ್ಧನಾ ದಾತನಿಗೆ ಕೋಪವನ್ನೆಬ್ಬಿಸುವಂತೆ ಅವರು ಹಿಂದಕ್ಕೆ ಹೋಗಿದ್ದಾರೆ.

ಯೆಶಾಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी