ಓಬದ್ಯ 1:12

ಆದರೆ ನಿನ್ನ ಸಹೋದರನ ದಿನದಲ್ಲಿ ಅವನು ಅನ್ಯನಾದ ದಿನದಲ್ಲಿ ನೀನು ನೋಡಬಾರ ದಾಗಿತ್ತು; ಯೆಹೂದನ ಮಕ್ಕಳ ಮೇಲೆ ಅವರ ನಾಶನದ ದಿವಸದಲ್ಲಿ ಸಂತೋಷಿಸಬಾರದಾಗಿತ್ತು; ಕಷ್ಟದ ದಿನದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು;

ಸಂದರ್ಭದೊಂದಿಗೆ ಓದಿ · ಓಬದ್ಯ 1

10ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಬಲಾತ್ಕಾರದ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚು ವದು; ನೀನು ಎಂದೆಂದಿಗೂ ಕಡಿದುಹಾಕಲ್ಪಡುವಿ.

11ನೀನು ಆ ಕಡೆಯಲ್ಲಿ ನಿಂತ ದಿನದಲ್ಲಿ ಪರರು ಅವನ ಸೆರೆಯಾಗಿ ತಕ್ಕೊಂಡುಹೋದ ದಿನದಲ್ಲಿ ಅನ್ಯರು ಅವನ ಬಾಗಲುಗಳಲ್ಲಿ ಪ್ರವೇಶಿಸಿ ಯೆರೂಸಲೇಮಿನ ಮೇಲೆ ಚೀಟುಗಳನ್ನು ಹಾಕಿದಾಗ ನೀನು ಸಹ ಅವರಲ್ಲಿ ಒಬ್ಬನ ಹಾಗಿದ್ದಿ.

12ಆದರೆ ನಿನ್ನ ಸಹೋದರನ ದಿನದಲ್ಲಿ ಅವನು ಅನ್ಯನಾದ ದಿನದಲ್ಲಿ ನೀನು ನೋಡಬಾರ ದಾಗಿತ್ತು; ಯೆಹೂದನ ಮಕ್ಕಳ ಮೇಲೆ ಅವರ ನಾಶನದ ದಿವಸದಲ್ಲಿ ಸಂತೋಷಿಸಬಾರದಾಗಿತ್ತು; ಕಷ್ಟದ ದಿನದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು;

13ನನ್ನ ಜನರ ಬಾಗಲೊಳಗೆ ಅವರ ಆಪತ್ತಿನ ದಿನದಲ್ಲಿ ಪ್ರವೇಶಿಸಬಾರದಾಗಿತ್ತು; ಹೌದು, ನೀನು ಅವರ ಆಪತ್ತಿನ ದಿನದಲ್ಲಿ ಅವರ ಕೇಡನ್ನು ನೋಡಬಾರ ದಾಗಿತ್ತು; ಅವರ ಆಪತ್ತಿನ ದಿನದಲ್ಲಿ ಅವರ ಆಸ್ತಿಯ ಮೇಲೆ ಕೈಹಾಕಬಾರದಾಗಿತ್ತು;

14ಅವನಲ್ಲಿ ಓಡಿ ಹೋದವರನ್ನು ಕಡಿದುಬಿಡುವದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು; ಕಷ್ಟದ ದಿನದಲ್ಲಿ ಅವನಲ್ಲಿ ಉಳಿದುಕೊಂಡವರನ್ನು ಒಪ್ಪಿಸಬಾರದಾಗಿತ್ತು.

ಓಬದ್ಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी