೧ ಪೂರ್ವಕಾಲವೃತ್ತಾಂತ 10:10

ಅವನ ಆಯುಧಗಳನ್ನು ತಮ್ಮ ದೇವರುಗಳ ಮನೆಯಲ್ಲಿ ಇಟ್ಟು ಅವರ ತಲೆಯನ್ನು ದಾಗೋನನ ಮನೆಯಲ್ಲಿ ಭದ್ರಪಡಿಸಿದರು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 10

8ಮಾರನೆ ದಿವಸದಲ್ಲಿ ಏನಾಯಿತಂದರೆ, ಫಿಲಿಷ್ಟಿ ಯರು ಕೊಲ್ಲಲ್ಪಟ್ಟವರನ್ನು ಸುಲುಕೊಳ್ಳಲು ಬಂದಾಗ ಗಿಲ್ಬೋಯ ಬೆಟ್ಟದಲ್ಲಿ ಬಿದ್ದಿದ್ದ ಸೌಲನನ್ನೂ ಅವನ ಕುಮಾರರನ್ನೂ ಕಂಡುಕೊಂಡರು.

9ಅವರು ಅವನನ್ನು ಸುಲುಕೊಂಡು ಅವನ ತಲೆಯನ್ನೂ ಆಯುಧಗಳನ್ನೂ ಎತ್ತಿಕೊಂಡುಹೋಗಿ ತಮ್ಮ ವಿಗ್ರಹಗಳಿಗೂ ಜನರಿಗೂ ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿ ಸಿದರು.

10ಅವನ ಆಯುಧಗಳನ್ನು ತಮ್ಮ ದೇವರುಗಳ ಮನೆಯಲ್ಲಿ ಇಟ್ಟು ಅವರ ತಲೆಯನ್ನು ದಾಗೋನನ ಮನೆಯಲ್ಲಿ ಭದ್ರಪಡಿಸಿದರು.

11ಯಾಬೇಷ್‌ ಗಿಲ್ಯಾದಿ ನವರೆಲ್ಲರೂ ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಕೇಳಿದಾಗ

12ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು ಸೌಲನ ಶರೀರವನ್ನೂ ಅವನ ಕುಮಾರರ ಶರೀರಗಳನ್ನು ತಕ್ಕೊಂಡು ಯಾಬೇಷಿಗೆ ತಂದು ಯಾಬೇಷಿನಲ್ಲಿರುವ ಒಂದು ಏಲಾ ಮರದ ಕೆಳಗೆ ಅವರ ಎಲುಬುಗಳನ್ನು ಹೂಣಿಟ್ಟು ಏಳುದಿವಸ ಉಪವಾಸ ಮಾಡಿದರು.

೧ ಪೂರ್ವಕಾಲವೃತ್ತಾಂತ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी