ಯೆಹೆಜ್ಕೇಲನು 21:31

ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರದ ಬೆಂಕಿಯನ್ನು ನಿನ್ನ ಮೇಲೆ ಊದಿ ನಾಶಪಡಿಸುವದರಲ್ಲಿ ಗಟ್ಟಿಗರಾದಂಥ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸು ವೆನು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 21

29ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ, ಹೀಗೆ ನಿನ್ನನ್ನು ಹತವಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ; ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.

30ಅದನ್ನು ನಾನು ಮತ್ತೆ ಒರೆಗೆ ಸೇರಿಸುವೆನೋ? ನೀನು ನಿರ್ಮಿಸಲ್ಪಟ್ಟ ಸ್ಥಳದಲ್ಲಿಯೇ ನೀನು ಹುಟ್ಟಿದ ಸ್ಥಳದಲ್ಲಿಯೇ ನಿನಗೆ ನ್ಯಾಯತೀರಿಸುವೆನು.

31ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರದ ಬೆಂಕಿಯನ್ನು ನಿನ್ನ ಮೇಲೆ ಊದಿ ನಾಶಪಡಿಸುವದರಲ್ಲಿ ಗಟ್ಟಿಗರಾದಂಥ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸು ವೆನು.

32ನೀನು ಅಗ್ನಿಗೆ ಆಹುತಿಯಾಗುವ ಸೌದೆಯಾ ಗುವಿ, ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವದು; ನೀನು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲವೆಂದು ಕರ್ತನಾದ ನಾನೇ ಹೇಳಿದ್ದೇನೆ.

ಯೆಹೆಜ್ಕೇಲನು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी