ಯೆಹೆಜ್ಕೇಲನು 46:11

ಪರಿಶುದ್ಧ ಹಬ್ಬಗಳಲ್ಲಿಯೂ ಸಭೆಗಳ ಲ್ಲಿಯೂ ಆಹಾರದ ಅರ್ಪಣೆಗೆ ಹೋರಿಗೆ ಒಂದು ಏಫವೂ ಟಗರಿಗೆ ಒಂದು ಏಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು. ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 46

9ಆದರೆ ದೇಶದ ಜನರು ಪರಿಶುದ್ಧ ಹಬ್ಬಗಳಲ್ಲಿ ಕರ್ತನ ಮುಂದೆ ಬರುವಾಗ ಉತ್ತರದ ಬಾಗಲಿನಿಂದ ಪ್ರವೇಶಿಸಿ ಆರಾ ಧಿಸಿದ ಮೇಲೆ ಅವನು ದಕ್ಷಿಣ ಬಾಗಲಿನ ಮಾರ್ಗ ವಾಗಿ ಹೊರಗೆ ಹೋಗಬೇಕು. ದಕ್ಷಿಣ ಬಾಗಲಿನ ಮಾರ್ಗವಾಗಿ ಪ್ರವೇಶಿಸಿದವನು ಉತ್ತರ ಬಾಗಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ಅವನು ಪ್ರವೇಶಿಸಿದ ಬಾಗಲಿನ ಮಾರ್ಗವಾಗಿಯೇ ತಿರುಗಿ ಹೊರಗೆ ಹೋಗಬಾರದು; ಆದರೆ ಅದಕ್ಕೆ ಎದುರಾಗಿ ಹೊರಗೆ ಹೋಗಬೇಕು.

10ಅವರು ಒಳಗೆ ಹೋಗು ವಾಗ ಅವರ ಮಧ್ಯದಲ್ಲಿರುವ ಪ್ರಧಾನನು ಒಳಗೆ ಹೋಗಬೇಕು. ಹೊರಗೆ ಹೋಗುವಾಗ ಹೊರಗೆ ಬರಬೇಕು.

11ಪರಿಶುದ್ಧ ಹಬ್ಬಗಳಲ್ಲಿಯೂ ಸಭೆಗಳ ಲ್ಲಿಯೂ ಆಹಾರದ ಅರ್ಪಣೆಗೆ ಹೋರಿಗೆ ಒಂದು ಏಫವೂ ಟಗರಿಗೆ ಒಂದು ಏಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು. ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು.

12ಪ್ರಧಾನನು ಉಚಿತವಾದ ದಹನಬಲಿಯನ್ನಾಗಲಿ ಸಮಾಧಾನದ ಬಲಿಗಳನ್ನಾಗಲಿ ಉಚಿತವಾಗಿ ಕರ್ತನಿಗೆ ಸಿದ್ಧಮಾಡು ವಾಗ ಅವರು ಪೂರ್ವದಿಕ್ಕಿಗೆ ಎದುರಾಗಿರುವ ಬಾಗಲನ್ನು ಅವನಿಗೆ ತೆರೆಯಬೇಕು; ಆಗ ಅವನು ತನ್ನ ದಹನಬಲಿಯನ್ನು ತನ್ನ ಸಮಾಧಾನದ ಬಲಿಗಳನ್ನು ಸಬ್ಬತ್ತು ದಿನದಲ್ಲಿ ಮಾಡಿದ ಹಾಗೆ ಸಿದ್ದಮಾಡಿ ಹೊರಗೆ ಹೋಗಬೇಕು, ಅವನು ಹೊರಗೆ ಹೋದ ಮೇಲೆ ಬಾಗಲನ್ನು ಮುಚ್ಚಬೇಕು.

13ನೀನು ಪ್ರತಿದಿನವೂ ಕರ್ತನಿಗೆ ಒಂದು ವರುಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ದಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು.

ಯೆಹೆಜ್ಕೇಲನು 46 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी