ವಿಮೋಚನಕಾಂಡ 6:13

ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಇಸ್ರಾಯೇಲ್‌ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡುವಂತೆ ಇಸ್ರಾ ಯೇಲ್ಯರ ಬಳಿಗೂ ಫರೋಹನ ಬಳಿಗೂ ಹೋಗ ಬೇಕೆಂದು ಹೇಳಿ ಅವರಿಗೆ ಆಜ್ಞಾಪಿಸಿದನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 6

11ಐಗುಪ್ತದ ಅರಸನಾದ ಫರೋಹನ ಬಳಿಗೆ ಹೋಗಿ ಅವನು ಇಸ್ರಾಯೇಲ್‌ ಮಕ್ಕಳನ್ನು ತನ್ನ ದೇಶದಿಂದ ಕಳುಹಿಸುವ ಹಾಗೆ ನೀನು ಅವನ ಸಂಗಡ ಮಾತನಾಡು ಅಂದನು.

12ಆದರೆ ಮೋಶೆಯು ಕರ್ತನ ಸನ್ನಿಧಿಯಲ್ಲಿ--ಇಗೋ, ಇಸ್ರಾಯೇಲ್‌ ಮಕ್ಕಳೇ ನನ್ನ ಮಾತನ್ನು ಕೇಳದಿರುವಲ್ಲಿ ತೊದಲು ನಾಲಿಗೆಯವನಾದ ನನ್ನ ಮಾತನ್ನು ಫರೋಹನು ಕೇಳುವದು ಹೇಗೆ ಎಂದು ಹೇಳಿದನು.

13ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಇಸ್ರಾಯೇಲ್‌ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡುವಂತೆ ಇಸ್ರಾ ಯೇಲ್ಯರ ಬಳಿಗೂ ಫರೋಹನ ಬಳಿಗೂ ಹೋಗ ಬೇಕೆಂದು ಹೇಳಿ ಅವರಿಗೆ ಆಜ್ಞಾಪಿಸಿದನು.

14ಅವರ ತಂದೆಗಳ ಮನೆಯ ಮುಖ್ಯಸ್ಥರು ಇವರೇ: ಇಸ್ರಾಯೇಲನ ಚೊಚ್ಚಲಮಗನಾದ ರೂಬೇನನ ಕುಮಾರರು: ಹನೋಕ್‌ ಫಲ್ಲು ಹೆಚ್ರೋನ್‌ ಕರ್ವಿಾ; ಇವರೇ ರೂಬೇನನ ಗೋತ್ರಗಳು.

15ಸಿಮೆಯೋನನ ಕುಮಾರರು: ಯೆಮೂಯೇಲ್‌, ಯಾವಿಾನ್‌ ಓಹದ್‌ ಯಾಕೀನ್‌ ಚೋಹರ್‌ ಮತ್ತು ಕಾನಾನ್ಯಳ ಮಗನಾದ ಸೌಲ: ಇವರೇ ಸಿಮೆಯೋನನ ಗೋತ್ರಗಳು.

ವಿಮೋಚನಕಾಂಡ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी