ದಾನಿಯೇಲನು 2:47

ಅರಸನು ದಾನಿಯೇಲನಿಗೆ ಉತ್ತರವಾಗಿ--ನೀನು ಈ ರಹಸ್ಯವನ್ನು ಪ್ರಕಟ ಮಾಡಲು ಸಮರ್ಥನಾದದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ ಅರಸುಗಳ ಕರ್ತನಾಗಿಯೂ ರಹಸ್ಯಗಳನ್ನು ಪ್ರಕಟಮಾಡುವಾತ ನಾಗಿಯೂ ಆಗಿದ್ದಾನೆ ಅಂದನು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 2

45ಆ, ಕಲ್ಲು ಕೈಗಳ ಸಹಾಯವಿಲ್ಲದೆ ಬೆಟ್ಟದೊಳಗಿಂದ ಒಡೆಯಲ್ಪಟ್ಟು ಕಬ್ಬಿಣವನ್ನೂ ಹಿತ್ತಾಳೆಯನ್ನೂ ಮಣ್ಣನ್ನೂ ಬೆಳ್ಳಿಯನ್ನೂ ಬಂಗಾರವನ್ನೂ ಧ್ವಂಸ ಮಾಡಿತೆಂದು ನೀನು ನೋಡಿದ್ದು ಇದೇ. ಮಹಾದೇವರು ಇನ್ನು ಮೇಲೆ ಸಂಭವಿಸುವಂಥದ್ದನ್ನು ಅರಸನಿಗೆ ತಿಳಿಯಪಡಿಸಿ ದ್ದಾನೆ; ಕನಸು ನಿಶ್ಚಯವಾಗಿದೆ; ಅದರ ಅರ್ಥಗಳೂ ಸತ್ಯವಾಗಿವೆ ಅಂದನು.

46ಆಗ ಅರಸನಾದ ನೆಬೂಕದ್ನೆ ಚ್ಚರನು ಅಡ್ಡಬಿದ್ದು ದಾನಿಯೇಲನಿಗೆ ನಮಸ್ಕರಿಸಿರಿ, ಅವನಿಗೆ ಕಾಣಿಕೆಗಳನ್ನೂ ಸುಗಂಧದ್ರವ್ಯ ಅರ್ಪಿಸಬೇ ಕೆಂದೂ ಆಜ್ಞಾಪಿಸಿದನು.

47ಅರಸನು ದಾನಿಯೇಲನಿಗೆ ಉತ್ತರವಾಗಿ--ನೀನು ಈ ರಹಸ್ಯವನ್ನು ಪ್ರಕಟ ಮಾಡಲು ಸಮರ್ಥನಾದದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ ಅರಸುಗಳ ಕರ್ತನಾಗಿಯೂ ರಹಸ್ಯಗಳನ್ನು ಪ್ರಕಟಮಾಡುವಾತ ನಾಗಿಯೂ ಆಗಿದ್ದಾನೆ ಅಂದನು.

48ಆಗ ಅರಸನು ದಾನಿಯೇಲನನ್ನು ಒಬ್ಬ ಮಹಾ ವ್ಯಕ್ತಿಯನ್ನಾಗಿ ಮಾಡಿ ಅವನಿಗೆ ಅನೇಕ ದೊಡ್ಡ ಬಹುಮಾನಗಳನ್ನು ಕೊಟ್ಟು ಸಮಸ್ತ ಬಾಬೆಲಿನ ಪ್ರಾಂತ್ಯಗಳಿಗೆ ಅಧಿಕಾರಿಯನ್ನಾ ಗಿಯೂ ಬಾಬೆಲಿನ ಸಮಸ್ತ ಜ್ಞಾನಿಗಳಿಗೆ ಮುಖ್ಯಾಧಿ ಪತಿಯನ್ನಾಗಿಯೂ ನೇಮಿಸಿದನು.

49ಆ ಮೇಲೆ ದಾನಿ ಯೇಲನು ಅರಸನನ್ನು ಬೇಡಿಕೊಂಡದ್ದರಿಂದ ಅರಸನು ಶದ್ರಕ್‌ ಮೇಷಕ್‌ ಮತ್ತು ಅಬೇದ್‌ನೆಗೋ ಎಂಬವರಿಗೆ ಬಾಬೆಲ್‌ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನಾದರೋ ಅರಸನ ಅರಮನೆಯಲ್ಲೇ ಇದ್ದನು.

ದಾನಿಯೇಲನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी