ಆದಿಕಾಂಡ 17:5

ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ.

ಸಂದರ್ಭದೊಂದಿಗೆ ಓದಿ · ಆದಿಕಾಂಡ 17

3ಆಗ ಅಬ್ರಾಮನು ಸಾಷ್ಟಾಂಗಬಿದ್ದನು. ಆಗ ದೇವರು ಅವನ ಸಂಗಡ ಮಾತನಾಡಿದ್ದೇನಂದರೆ--

4ಇಗೋ, ನಾನಾದರೋ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ. ನೀನು ಅನೇಕ ಜನಾಂಗಗಳ ತಂದೆ ಯಾಗಿರುವಿ.

5ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ.

6ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು.

7ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ.

ಆದಿಕಾಂಡ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी