೨ ಅರಸುಗಳು 23:28

ಯೋಷೀಯನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತ ಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

ಸಂದರ್ಭದೊಂದಿಗೆ ಓದಿ · ೨ ಅರಸುಗಳು 23

26ಆದರೆ ಮನಸ್ಸೆಯು ಕರ್ತನಿಗೆ ಕೋಪ ವನ್ನು ಎಬ್ಬಿಸಲು ಮಾಡಿದ ಎಲ್ಲಾ ಕ್ರಿಯೆಗಳಿಗೋಸ್ಕರ ಯೆಹೂದಕ್ಕೆ ವಿರೋಧವಾಗಿ ತನ್ನನ್ನು ಉದ್ರೇಕಿಸಿದ ಕೋಪವನ್ನೂ ತನ್ನ ಮಹಾಕೋಪದ ಉರಿಯನ್ನೂ ಕರ್ತನು ಬಿಟ್ಟುಬಿಡಲಿಲ್ಲ.

27ಕರ್ತನು--ನಾನು ಇಸ್ರಾ ಯೇಲನ್ನು ತೆಗೆದು ಹಾಕಿದ ಹಾಗೆ ಯೆಹೂದವನ್ನು ಸಹ ನನ್ನ ಸಮ್ಮುಖದಿಂದ ತೆಗೆದುಹಾಕುವೆನು; ಇದ ಲ್ಲದೆ ನಾನು ಆದುಕೊಂಡ ಈ ಪಟ್ಟಣವಾದ ಯೆರೂ ಸಲೇಮನ್ನೂ ನನ್ನ ಹೆಸರು ಅಲ್ಲಿರುವದೆಂದು ನಾನು ಹೇಳಿದ ಮನೆಯನ್ನೂ ತೆಗೆದುಬಿಡುವೆನು ಅಂದನು.

28ಯೋಷೀಯನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತಾಂತ ಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?

29ಅವನ ದಿವಸಗಳಲ್ಲಿ ಐಗುಪ್ತದ ಅರಸನಾದ ಫರೋಹನೆಕೋ ಎಂಬವನು ಅಶ್ಶೂರಿನ ಅರಸನ ಮೇಲೆ ಯೂಫ್ರೇ ಟೀಸ್‌ ನದಿಗೆ ಹೋದನು; ಅರಸನಾದ ಯೋಷೀ ಯನು ಅವನ ಮೇಲೆ ಹೋದನು; ಅವನು ಇವನನ್ನು ನೋಡಿದಾಗ ಮೆಗಿದ್ದೋವಿನ ಬಳಿಯಲ್ಲಿ ಕೊಂದು ಹಾಕಿದನು.

30ಅವನ ಸೇವಕರು ಸತ್ತವನಾದ ಅವನನ್ನು ರಥದಲ್ಲಿ ಮೆಗಿದ್ದೋವಿನಿಂದ ಯೆರೂಸಲೇಮಿಗೆ ತಕ್ಕೊಂಡು ಬಂದು ಅವನ ಸ್ವಂತ ಸಮಾಧಿಯಲ್ಲಿ ಹೂಣಿಟ್ಟರು. ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ಅಭಿಷೇಕಿಸಿ ಅವನ ತಂದೆಗೆ ಬದಲಾಗಿ ಅರಸನನ್ನಾಗಿ ಮಾಡಿದರು.

೨ ಅರಸುಗಳು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी