ಯೆರೆಮಿಯ 14:8

ಓ ಇಸ್ರಾಯೇಲಿನ ನಿರೀಕ್ಷಣೆಯೇ, ಇಕ್ಕಟ್ಟಿನ ಕಾಲದಲ್ಲಿ ಅವನನ್ನು ರಕ್ಷಿಸುವಾತನೇ, ನೀನು ಯಾಕೆ ದೇಶದಲಿ ಅನ್ಯನ ಹಾಗೆಯೂ ರಾತ್ರಿ ಕಳೆಯುವದಕ್ಕೆ ಇಳು ಕೊಳ್ಳುವ ಪ್ರಯಾಣಸ್ಥನ ಹಾಗೆಯೂ ಇರಬೇಕು?

ಸಂದರ್ಭದೊಂದಿಗೆ ಓದಿ · ಯೆರೆಮಿಯ 14

6ಕಾಡು ಕತ್ತೆಗಳು ಉನ್ನತ ಸ್ಥಳಗಳಲ್ಲಿ ನಿಂತು ನರಿಗಳ ಹಾಗೆ ಗಾಳಿಯನ್ನು ಹೀರಿಕೊಳ್ಳುತ್ತವೆ; ಹುಲ್ಲು ಇಲ್ಲದ ಕಾರಣ ಅವುಗಳ ಕಣ್ಣುಗಳು ಕ್ಷೀಣವಾಗುತ್ತವೆ.

7ಓ ಕರ್ತನೇ, ನಮ್ಮ ಅಕ್ರಮಗಳು ನಮಗೆ ವಿರೋಧ ವಾಗಿ ಸಾಕ್ಷಿಕೊಟ್ಟರೂ ನೀನೇ ನಿನ್ನ ಹೆಸರಿಗೋಸ್ಕರ ನಡಿಸು; ನಮ್ಮ ಹಿಂಜರಿಯುವಿಕೆಗಳು ಅನೇಕವಾಗಿವೆ; ನಿನಗೆ ವಿರೋಧವಾಗಿ ಪಾಪಮಾಡಿದ್ದೇವೆ.

8ಓ ಇಸ್ರಾಯೇಲಿನ ನಿರೀಕ್ಷಣೆಯೇ, ಇಕ್ಕಟ್ಟಿನ ಕಾಲದಲ್ಲಿ ಅವನನ್ನು ರಕ್ಷಿಸುವಾತನೇ, ನೀನು ಯಾಕೆ ದೇಶದಲಿ ಅನ್ಯನ ಹಾಗೆಯೂ ರಾತ್ರಿ ಕಳೆಯುವದಕ್ಕೆ ಇಳು ಕೊಳ್ಳುವ ಪ್ರಯಾಣಸ್ಥನ ಹಾಗೆಯೂ ಇರಬೇಕು?

9ನೀನು ಯಾಕೆ ಗಾಬರಿಪಡುವ ಮನುಷ್ಯನ ಹಾಗೆಯೂ ರಕ್ಷಿಸಲಾರದ ಪರಾಕ್ರಮಶಾಲಿಯ ಹಾಗೆಯೂ ಇರಬೇಕು? ಆದರೂ ನೀನು, ಓ ಕರ್ತನೇ, ನಮ್ಮ ಮಧ್ಯದಲ್ಲಿ ಇದ್ದೀ, ನಿನ್ನ ಹೆಸರಿನಿಂದ ನಾವು ಕರೆಯಲ್ಪಟ್ಟಿದ್ದೇವೆ; ನಮ್ಮನ್ನು ಕೈ ಬಿಡಬೇಡ.

10ಕರ್ತನು ಈ ಜನರಿಗೆ ಹೀಗೆ ಹೇಳುತ್ತಾನೆ--ಹೀಗೆ ತಿರುಗಾಡುವದಕ್ಕೆ ಅವರು ಪ್ರೀತಿಮಾಡಿದ್ದಾರೆ; ತಮ್ಮ ಕಾಲುಗಳನ್ನು ಹಿಂದೆಗೆಯಲಿಲ್ಲ; ಆದದರಿಂದ ಕರ್ತನು ಅವರನ್ನು ಅಂಗೀಕರಿಸುವದಿಲ್ಲ , ಈಗಲೇ ಅವರ ಅಕ್ರಮವನ್ನು ಜ್ಞಾಪಕಮಾಡಿಕೊಳ್ಳುವನು; ಅವರ ಪಾಪಗಳನ್ನು ವಿಚಾರಿಸುವನು.

ಯೆರೆಮಿಯ 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी