ಯೆರೆಮಿಯ 16:13

ಆದದರಿಂದ ನಾನು ನಿಮ್ಮನ್ನು ಈ ದೇಶದೊಳಗಿಂದ ಬಿಸಾಡಿ ನಿಮಗೂ ನಿಮ್ಮ ತಂದೆಗಳಿಗೂ ತಿಳಿಯದ ದೇಶಕ್ಕೆ ಎಸೆಯುವೆನು; ಅಲ್ಲಿ ನೀವು ರಾತ್ರಿ ಹಗಲು ಬೇರೆ ದೇವರುಗಳಿಗೆ ಸೇವೆಮಾಡುವಿರಿ ನಾನು ನಿಮಗೆ ಕನಿಕರ ತೋರಿಸುವದಿಲ್ಲ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 16

11ನಿಮ್ಮ ತಂದೆಗಳು ನನ್ನನ್ನು ಬಿಟ್ಟು ಬೇರೆ ದೇವರುಗಳನ್ನು ಹಿಂಬಾಲಿಸಿ ಸೇವಿಸಿ ಆರಾಧಿಸಿ ನನ್ನನ್ನು ತೊರೆದುಬಿಟ್ಟು, ನನ್ನ ನ್ಯಾಯ ಪ್ರಮಾಣವನ್ನು ಕೈಕೊಳ್ಳಲಿಲ್ಲ.

12ನೀವು ನಿಮ್ಮ ತಂದೆಗಳಿಗಿಂತ ಇನ್ನೂ ಕೆಟ್ಟ ಕೆಲಸ ಮಾಡಿದ್ದೀರಿ; ಇಗೋ, ನನ್ನನ್ನು ಕೇಳದ ಹಾಗೆ ನಿಮ್ಮ ನಿಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡೆದುಕೊಂಡಿದ್ದೀರಿ.

13ಆದದರಿಂದ ನಾನು ನಿಮ್ಮನ್ನು ಈ ದೇಶದೊಳಗಿಂದ ಬಿಸಾಡಿ ನಿಮಗೂ ನಿಮ್ಮ ತಂದೆಗಳಿಗೂ ತಿಳಿಯದ ದೇಶಕ್ಕೆ ಎಸೆಯುವೆನು; ಅಲ್ಲಿ ನೀವು ರಾತ್ರಿ ಹಗಲು ಬೇರೆ ದೇವರುಗಳಿಗೆ ಸೇವೆಮಾಡುವಿರಿ ನಾನು ನಿಮಗೆ ಕನಿಕರ ತೋರಿಸುವದಿಲ್ಲ.

14ಆದದರಿಂದ ಇಗೋ, ಕರ್ತನು ಹೇಳುವದೇ ನಂದರೆ--ಇಗೋ, ಇಸ್ರಾಯೇಲಿನ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ಕರ್ತನ ಜೀವದಾಣೆ ಎಂದು ಇನ್ನು ಹೇಳುವದಿಲ್ಲ;

15ಆದರೆ ಕರ್ತನ ಜೀವದಾಣೆ, ಇಸ್ರಾಯೇಲಿನ ಮಕ್ಕಳನ್ನು ಉತ್ತರ ದೇಶ ದೊಳಗಿಂದಲೂ ನಾನು ಅವರನ್ನು ಅಟ್ಟಿ ಬಿಟ್ಟಿದ್ದ ಸಮಸ್ತ ದೇಶಗಳೊಳಗಿಂದಲೂ ಬರಮಾಡಿ ನಾನು ಅವರ ಪಿತೃಗಳಿಗೆ ಕೊಟ್ಟಂಥ ಅವರ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು ಎಂದು ಹೇಳುವ ದಿನಗಳು ಬರುವವು.

ಯೆರೆಮಿಯ 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी