ದಾನಿಯೇಲನು 2:30

ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ದಿಯುಳ್ಳ ವನೆಂದಲ್ಲ, ಕನಸಿನ ಅರ್ಥವು ಅರಸನಿಗೆ ಗೋಚರ ವಾಗಿ ನಿನ್ನ ಹೃದಯದ ಯೋಚನೆಗಳು ನಿನಗೆ ತಿಳಿದು ಬರಲೆಂದು ನನಗೆ ಪ್ರಕಟಮಾಡಲ್ಪಟ್ಟಿದೆ.

ಸಂದರ್ಭದೊಂದಿಗೆ ಓದಿ · ದಾನಿಯೇಲನು 2

28ಆದರೆ ಈ ರಹಸ್ಯಗಳನ್ನು ಪ್ರಕಟಪಡಿಸುವಂತ ದೇವರು ಪರಲೋಕದಲ್ಲಿದ್ದಾನೆ; ಆತನು ದಿವಸಗಳ ಅಂತ್ಯದಲ್ಲಿ ಸಂಭವಿಸುವಂತವುಗಳನ್ನು ಅರಸನಾದ ನೆಬೂಕದ್ನೆಚ್ಚ ರನಿಗೆ ತಿಳಿಯಪಡಿಸುತ್ತಾನೆ. ನಿನ್ನ ಕನಸಿನಲ್ಲಿ, ನಿನ್ನ ಹಾಸಿಗೆಯಲ್ಲಿ ಬಂದ ನಿನ್ನ ಮನಸ್ಸಿನ ದರ್ಶನಗಳು ಇವೇ ಆಗಿವೆ,

29ಓ ಅರಸನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಇನ್ನು ಮುಂದೆ ಏನು ಸಂಭವಿ ಸುವದೋ ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ! ಆ ರಹಸ್ಯಗಳನ್ನು ವ್ಯಕ್ತಪಡಿಸುವಾತನು ಮುಂದೆ ಸಂಭ ವಿಸುವದು ಏನೆಂಬದನ್ನು ನಿನಗೆ ಗೋಚರಪಡಿಸುತ್ತಾನೆ.

30ನಾನೇ ಎಲ್ಲಾ ಜೀವಂತರಿಗಿಂತ ಹೆಚ್ಚು ಬುದ್ದಿಯುಳ್ಳ ವನೆಂದಲ್ಲ, ಕನಸಿನ ಅರ್ಥವು ಅರಸನಿಗೆ ಗೋಚರ ವಾಗಿ ನಿನ್ನ ಹೃದಯದ ಯೋಚನೆಗಳು ನಿನಗೆ ತಿಳಿದು ಬರಲೆಂದು ನನಗೆ ಪ್ರಕಟಮಾಡಲ್ಪಟ್ಟಿದೆ.

31ಓ ರಾಜನೇ, ನೀನು ನೋಡಲಾಗಿ, ಇಗೋ, ಒಂದು ದೊಡ್ಡ ಪ್ರತಿಮೆಯು ಕಾಣಿಸಿತು. ಮಹಾ ಪ್ರಕಾಶಮಾನ ವಾದ ಈ ದೊಡ್ಡ ಪ್ರತಿಮೆಯು ನಿನ್ನ ಮುಂದೆ ನಿಂತಿತ್ತು; ಅದರ ಆಕಾರವು ಭಯಂಕರವಾಗಿತ್ತು.

32ಈ ಪ್ರತಿ ಮೆಯ ತಲೆಯು ಚೊಕ್ಕ ಬಂಗಾರದಿಂದಲೂ ಅದರ ಎದೆಯು ಮತ್ತು ತೋಳುಗಳು ಬೆಳ್ಳಿಯಿಂದಲೂ ಅದರ ಹೊಟ್ಟೆಯು ಮತ್ತು ತೊಡೆಗಳು ಹಿತ್ತಾಳೆಯಿಂದಲೂ

ದಾನಿಯೇಲನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी