ಪೇತ್ರನು ಆತನಿಗೆ-- ಅನ್ಯರಿಂದ ಎಂದು ಹೇಳಲಾಗಿ ಆತನು ಅವನಿಗೆ--ಹಾಗಾದರೆ ಮಕ್ಕಳು ಸ್ವತಂತ್ರರೇ.
24ತರುವಾಯ ಅವರು ಕಪೆರ್ನೌಮಿಗೆ ಬಂದಾಗ ತೆರಿಗೆ ಹಣವನ್ನು ವಸೂಲಿಮಾಡುವವರು ಪೇತ್ರನ ಬಳಿಗೆ ಬಂದು--ನಿಮ್ಮ ಬೋಧಕನು ತೆರಿಗೆಯನ್ನು ಸಲ್ಲಿಸುವದಿಲ್ಲವೋ ಎಂದು ಕೇಳಿದರು. ಅದಕ್ಕೆ ಅವನು--ಸಲ್ಲಿಸುವನು ಅಂದನು.
25ಅವನು ಮನೆ ಯೊಳಕ್ಕೆ ಬಂದಾಗ ಯೇಸು ಮುಂದಾಗಿ ಅವನಿಗೆ--ಸೀಮೋನನೇ, ನಿನಗೆ ಹೇಗೆ ತೋರುತ್ತದೆ? ಭೂಲೋ ಕದ ರಾಜರು ಯಾರಿಂದ ಕಪ್ಪವನ್ನು ಇಲ್ಲವೆ ತೆರಿಗೆ ಯನ್ನು ತಕ್ಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ ಇಲ್ಲವೆ ಅನ್ಯರಿಂದಲೋ ಎಂದು ಕೇಳಿದನು.
26ಪೇತ್ರನು ಆತನಿಗೆ-- ಅನ್ಯರಿಂದ ಎಂದು ಹೇಳಲಾಗಿ ಆತನು ಅವನಿಗೆ--ಹಾಗಾದರೆ ಮಕ್ಕಳು ಸ್ವತಂತ್ರರೇ.
27ಹೀಗಿದ್ದರೂ ನಾವು ಅವರನ್ನು ಅಭ್ಯಂತರಪಡಿಸದಂತೆ ನೀನು ಸಮುದ್ರಕ್ಕೆ ಹೋಗಿ ಗಾಳವನ್ನು ಹಾಕು; ಆಗ ಮೊದಲು ಬರುವ ಮಾನನ್ನು ಹಿಡಿದು ಅದರ ಬಾಯನ್ನು ತೆರೆದರೆ ಅದರಲ್ಲಿ ಒಂದು ನಾಣ್ಯವನ್ನು ಕಾಣುವಿ; ಅದನ್ನು ತಕ್ಕೊಂಡು ನನ್ನದೂ ನಿನ್ನದೂ ಎಂದು ಹೇಳಿ ಅವರಿಗೆ ಕೊಡು ಎಂದು ಹೇಳಿದ
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ