ಆದಿಕಾಂಡ 35:11

ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 35

9ಯಾಕೋಬನು ಪದ್ದನ್‌ ಅರಾಮಿನಿಂದ ಬಂದಾಗ ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ ಅವನನ್ನು ಆಶೀರ್ವದಿಸಿದನು.

10ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್‌ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್‌ ಎಂದು ಹೆಸರಿಟ್ಟನು.

11ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.

12ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು.

13ಆಗ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಏರಿಹೋದನು.

ಆದಿಕಾಂಡ 35 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी