ಯೆರೆಮಿಯ 30:16

ಆದರೂ ನಿನ್ನನ್ನು ನುಂಗುವವರೆಲ್ಲರೂ ನುಂಗಲ್ಪಡು ವರು; ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಗೆ ಹೋಗುವನು; ನಿನ್ನನ್ನು ಕೊಳ್ಳೆಮಾಡುವವರು ಕೊಳ್ಳೆ ಯಾಗುವರು; ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 30

14ನಿನ್ನನ್ನು ಪ್ರೀತಿ ಮಾಡುವವರೆಲ್ಲರು ನಿನ್ನನ್ನು ಮರೆತುಬಿಟ್ಟಿದ್ದಾರೆ, ನಿನ್ನನ್ನು ಹುಡುಕುವದಿಲ್ಲ; ನಿನ್ನ ಅಕ್ರಮಗಳು ಬಹಳವೂ ನಿನ್ನ ಪಾಪಗಳು ಪ್ರಬಲವೂ ಆಗಿರುವದರಿಂದ ಶತ್ರುವಿನ ಗಾಯದಿಂದಲೂ ಕ್ರೂರನ ಶಿಕ್ಷೆಯಿಂದಲೂ ನಾನು ನಿನ್ನನ್ನು ಗಾಯಪಡಿಸಿದ್ದೇನೆ.

15ನಿನ್ನ ಗಾಯದ ನೋವಿನ ನಿಮಿತ್ತ ಯಾಕೆ ಕೂಗುತ್ತೀ? ನಿನ್ನ ದುಃಖವು ಗುಣವಾಗ ದಂಥದ್ದೇ; ನಿನ್ನ ಅಕ್ರಮಗಳು ಬಹಳವಾಗಿರುವದ ರಿಂದಲೂ ನಿನ್ನ ಪಾಪಗಳು ಪ್ರಬಲವಾಗಿರುವದ ರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ.

16ಆದರೂ ನಿನ್ನನ್ನು ನುಂಗುವವರೆಲ್ಲರೂ ನುಂಗಲ್ಪಡು ವರು; ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಗೆ ಹೋಗುವನು; ನಿನ್ನನ್ನು ಕೊಳ್ಳೆಮಾಡುವವರು ಕೊಳ್ಳೆ ಯಾಗುವರು; ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು.

17ಚೀಯೋನು ತಳ್ಳಿಬಿಡಲ್ಪ ಟ್ಟದ್ದೂ ಅದನ್ನು ವಿಚಾರಿಸುವವರು ಯಾರೂ ಇಲ್ಲ ವೆಂದೂ ಅವರು ನಿನ್ನ ವಿಷಯ ಹೇಳುವದರಿಂದ ನಿನಗೆ ಕ್ಷೇಮವನ್ನುಂಟು ಮಾಡುವೆನು; ನಿನ್ನ ಗಾಯ ಗಳನ್ನು ಸ್ವಸ್ಥ ಮಾಡುವೆನೆಂದು ಕರ್ತನು ಅನ್ನುತ್ತಾನೆ.

18ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಯಾಕೋಬನ ಗುಡಾರಗಳ ಸೆರೆಯನ್ನು ತಿರುಗಿ ತರುತ್ತೇನೆ; ಅವನ ನಿವಾಸಗಳನ್ನು ಕರುಣಿಸುತ್ತೇನೆ; ಪಟ್ಟಣವು ಅದರ ದಿಣ್ಣೆಯ ಮೇಲೆ ಕಟ್ಟಲ್ಪಡುವದು; ಅರಮನೆಯು ತಕ್ಕಸ್ಥಳದಲ್ಲಿ ನೆಲೆಯಾಗಿರುವದು.

ಯೆರೆಮಿಯ 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी