ಹಾಗೆಯೇ, ಜ್ಞಾನಿಗಳನ್ನು ಕೊಲ್ಲಬೇಕೆಂಬ ನಿರ್ಣಯವು ಹೊರಟಿತು; ಆಗ ದಾನಿಯೇಲನನ್ನೂ ಅವನ ಜೊತೆಗಾರರನ್ನೂ ಕೊಲ್ಲಲು ಹುಡುಕಿದರು.
11ಅರಸನು ಕೇಳುವ ಸಂಗತಿಯು ಅಪರೂಪವಾದದ್ದು ಮತ್ತು ಮಾನವರ ಸಂಗಡ ವಾಸಮಾಡದ ದೇವರುಗಳೇ ಹೊರತು ಇನ್ಯಾರೂ ಅದನ್ನು ಅರಸನ ಮುಂದೆ ತಿಳಿಸಲಾರರು ಅಂದರು.
12ಇದರಿಂದ ಅರಸನು ಕೋಪವುಳ್ಳವನಾಗಿ ಮಹಾರೌದ್ರದಿಂದ ಬಾಬೆಲಿನಲ್ಲಿ ರುವ ಎಲ್ಲಾ ಜ್ಞಾನಿಗಳನ್ನು ನಾಶಮಾಡಬೇಕೆಂದು ಆಜ್ಞಾ ಪಿಸಿದನು.
13ಹಾಗೆಯೇ, ಜ್ಞಾನಿಗಳನ್ನು ಕೊಲ್ಲಬೇಕೆಂಬ ನಿರ್ಣಯವು ಹೊರಟಿತು; ಆಗ ದಾನಿಯೇಲನನ್ನೂ ಅವನ ಜೊತೆಗಾರರನ್ನೂ ಕೊಲ್ಲಲು ಹುಡುಕಿದರು.
14ಆ ಮೇಲೆ ಬಾಬೆಲಿನ ಜ್ಞಾನಿಗಳನ್ನು ಕೊಲ್ಲಲ್ಲು ಹೊರಟಿದ್ದ ಅರಸನ ಕಾವಲುಗಾರರ ಅಧಿಪತಿಯಾದ ಅರ್ಯೋಕನಿಗೆ ದಾನಿಯೇಲನು ಆಲೋಚನೆ ಯಿಂದಲೂ ಜ್ಞಾನದಿಂದಲೂ ಉತ್ತರಕೊಟ್ಟನು;
15ಆಗ ದಾನಿಯೇಲನು ಅರಸನ ಅಧಿಪತಿಯಾದ ಅರ್ಯೋಕ ನಿಗೆ ಪ್ರತ್ಯುತ್ತರವಾಗಿ--ಅರಸನಿಂದ ಈ ನಿರ್ಣಯವು ಇಷ್ಟು ತೀಕ್ಷ್ಣವಾದದ್ದೇನು ಎಂದು ಕೇಳಲು ಅರ್ಯೋ ಕನು ದಾನಿಯೇಲನಿಗೆ ಆ ಸಂಗತಿಯ ವಿಷಯ ವಿವರಿ ಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ