೧ ಕೊರಿಂಥದವರಿಗೆ 1:25

ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ.

ಸಂದರ್ಭದೊಂದಿಗೆ ಓದಿ · ೧ ಕೊರಿಂಥದವರಿಗೆ 1

23ನಾವಾದರೋ ಶಿಲುಬೆಗೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರ ಪಡಿಸುತ್ತೇವೆ. ಆತನು ಯೆಹೂದ್ಯರಿಗೆ ಅಭ್ಯಂತರವೂ ಗ್ರೀಕರಿಗೆ ಹುಚ್ಚುತನವೂ ಆಗಿದ್ದಾನೆ.

24ಆದರೆ ಕರೆಯಲ್ಪಟ್ಟ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾನೆ.

25ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ.

26ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ; ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಬಲಿಷ್ಠರೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ.

27ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ;

೧ ಕೊರಿಂಥದವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी