ರೂತಳು 2:4

ಇಗೋ, ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ ಕರ್ತನು ನಿಮ್ಮ ಸಂಗಡ ಇರಲಿ ಅಂದನು. ಅದಕ್ಕೆ ಅವರು ಕರ್ತನು ನಿನ್ನನ್ನು ಆಶೀರ್ವ ದಿಸಲಿ ಅಂದರು.

ಸಂದರ್ಭದೊಂದಿಗೆ ಓದಿ · ರೂತಳು 2

2ಮೋವಾಬ್ಯಳಾದ ರೂತಳು ನೊವೊಮಿಗೆ ನಾನು ಹೊಲಕ್ಕೆ ಹೋಗಿ ಯಾವನ ಕೃಪೆಯು ನನಗೆ ಆಗುವದೋ ಅವನ ಹೊಲದಲ್ಲಿ ಹಕ್ಕಲ ತೆನೆಗಳನ್ನು ಕೂಡಿಸಿಕೊಳ್ಳುವೆನು ಅಂದಳು. ಅದಕ್ಕೆ ಇವಳು ನನ್ನ ಮಗಳೇ, ಹೋಗು ಅಂದಳು.

3ಅವಳು ಹೋಗಿ ಹೊಲದಲ್ಲಿ ಕೊಯ್ಯುವವರ ಹಿಂದೆ ಹಕ್ಕಲಾದು ಕೊಂಡಳು. ಅವಳಿಗೆ ಪ್ರಾಪ್ತಿಸಿದ ಆ ಹೊಲದ ಭಾಗ ಎಲೀಮೆಲೆಕನ ಸಂಬಂಧಿಕನಾದ ಬೋವಜನದಾಗಿತ್ತು.

4ಇಗೋ, ಬೋವಜನು ಬೇತ್ಲೆಹೇಮಿನಿಂದ ಬಂದು ಕೊಯ್ಯುವವರಿಗೆ ಕರ್ತನು ನಿಮ್ಮ ಸಂಗಡ ಇರಲಿ ಅಂದನು. ಅದಕ್ಕೆ ಅವರು ಕರ್ತನು ನಿನ್ನನ್ನು ಆಶೀರ್ವ ದಿಸಲಿ ಅಂದರು.

5ಬೋವಜನು ಕೊಯ್ಯುವವರ ಮೇಲೆ ಮೇಲ್ಗಾವಲಿಯಾಗಿ ಇಟ್ಟ ತನ್ನ ಸೇವಕನಿಗೆ ಇವಳು ಯಾರ ಹುಡುಗಿ ಅಂದನು.

6ಅದಕ್ಕೆ ಕೊಯ್ಯು ವವರ ಮೇಲೆ ಮೇಲ್ಗಾವಲಿಯಾಗಿ ಇಡಲ್ಪಟ್ಟ ಆ ಸೇವಕನು ಪ್ರತ್ಯುತ್ತರವಾಗಿ ಇವಳು ಮೋವಾಬ್‌ ಸೀಮೆಯಿಂದ ನೊವೊಮಿಯ ಸಂಗಡ ಹಿಂದಿರುಗಿ ಬಂದ ಮೋವಾಬಿನ ಹುಡುಗಿ.

ರೂತಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी