ಮೋವಾಬ್ಯರಿಗೆ ನಾನು ನ್ಯಾಯಗಳನ್ನು ತೀರಿಸುವೆನು; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
9ಆದದರಿಂದ ಇಗೋ, ನಾನು ಮೋವಾಬಿನ ಗಡಿಯನ್ನು ಪಟ್ಟಣಗಳ ಕಡೆ ಯಿಂದಲೂ ಅದರ ಪ್ರಾಂತ್ಯದಲ್ಲಿರುವಂತ ಮಹತ್ತಾದ ರಮ್ಯ ದೇಶದ ಪಟ್ಟಣಗಳಾದ ಬೇತ್ಯೆಷೀ ಮೋತ್ ಬಾಳ್ಮೆ ಯೋನ್ ಕಿರ್ಯಾಥಯಿಮ್
10ಸೀಮೆಗಳನ್ನಲ್ಲದೆ ಅಮ್ಮೋನನಿಗೆ ಮೂಡಣದ ವರೆಗೆ ಸ್ವಾಸ್ತ್ಯವಾಗಿ ಕೊಟ್ಟು ಅಮ್ಮೋನ್ಯರು ಜನಾಂಗಗಳೊಳಗೆ ಜ್ಞಾಪಕ ಮಾಡದ ಹಾಗೆ ಅವ ರಿಗೆ ಸ್ವಾಸ್ತ್ಯವಾಗಿ ಕೊಡುವೆನು;
11ಮೋವಾಬ್ಯರಿಗೆ ನಾನು ನ್ಯಾಯಗಳನ್ನು ತೀರಿಸುವೆನು; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
12ದೇವರಾದ ಕರ್ತನು--ಎದೋಮು ಮತ್ತು ಯೆಹೂದನ ಮನೆತನದವರಿಗೆ ಮುಯ್ಯಿಗೆಮುಯ್ಯಿ ತೀರಿಸಿದ್ದರಿಂದಲೇ ಮತ್ತು ಅತಿ ಅಪರಾಧ ಮಾಡಿ ಅವರಲ್ಲಿ ಸೇಡು ತೀರಿಸಿ ತೆಗೆದುಕೊಂಡದ್ದರಿಂದಲೇ ಎಂದು ಹೇಳುತ್ತಾನೆ.
13ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ