ಪರಮ ಗೀತ 5:14

ಅವನ ಕೈಗಳು ಬೆರುಲ್ಲಗಳಿಂದ ಜೋಡಿಸಲ್ಪಟ್ಟ ಬಂಗಾರದ ಉಂಗುರಗಳಾಗಿವೆ. ಅವನ ಮೈ ನೀಲಗಳಿಂದ ಖಚಿಸ ಲ್ಪಟ್ಟ ಹೊಳೆಯುವ ದಂತದ ಹಾಗೆ ಅದೆ.

ಸಂದರ್ಭದೊಂದಿಗೆ ಓದಿ · ಪರಮ ಗೀತ 5

12ಅವನ ಕಣ್ಣುಗಳು ಯುಕ್ತವಾಗಿ ಇರಿಸಲ್ಪಟ್ಟು ಹಾಲಿನಿಂದ ತೊಳೆಯಲ್ಪಟ್ಟ ಜಲದ ಕಾಲಿವೆಗಳ ಬಳಿಯಲ್ಲಿರುವ ಪಾರಿವಾಳಗಳ ಕಣ್ಣುಗಳ ಹಾಗೆ ಅವೆ.

13ಅವನ ಕೆನ್ನೆಗಳು ಸುಗಂಧಮಡಿಯ ಹಾಗೆಯೂ ಸುವಾಸನೆಯ ಪುಷ್ಪಗಳ ಹಾಗೆಯೂ ಅವೆ. ಅವನ ತುಟಿಗಳು ತಾವರೆಗಳ ಹಾಗೆ ಸೋರುವ ಸುಗಂಧ ರಕ್ತಬೋಳವನ್ನು ಸುರಿಯುತ್ತವೆ.

14ಅವನ ಕೈಗಳು ಬೆರುಲ್ಲಗಳಿಂದ ಜೋಡಿಸಲ್ಪಟ್ಟ ಬಂಗಾರದ ಉಂಗುರಗಳಾಗಿವೆ. ಅವನ ಮೈ ನೀಲಗಳಿಂದ ಖಚಿಸ ಲ್ಪಟ್ಟ ಹೊಳೆಯುವ ದಂತದ ಹಾಗೆ ಅದೆ.

15ಅವನ ಕಾಲುಗಳು ಶುದ್ಧ ಬಂಗಾರದ ಗದ್ದಿಗೆಯ ಮೇಲೆ ಇರಿಸಿದ ಬಿಳೀ ಕಲ್ಲಿನ ಸ್ತಂಭಗಳ ಹಾಗೆ ಅವೆ. ಅವನ ಮುಖವು ಲೆಬನೋನಿನ ಹಾಗೆ ದೇವದಾರುಗಳ ಹಾಗೆ ಶ್ರೇಷ್ಠವಾಗಿದೆ.

16ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.

ಪರಮ ಗೀತ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी