ನೆಹೆಮಿಯ 8:17

ಈ ಪ್ರಕಾರ ಸೆರೆಯಿಂದ ತಿರಿಗಿ ಬಂದ ಸಭೆಯವರೆಲ್ಲರೂ ಗುಡಾರಗಳನ್ನು ಹಾಕಿ ಗುಡಾರಗಳಲ್ಲಿ ವಾಸವಾಗಿದ್ದರು. ನೂನನ ಮಗನಾದ ಯೆಹೋಶುವನ ದಿನವು ಮೊದಲ ಗೊಂಡು ಆ ದಿವಸದ ವರೆಗೂ ಇಸ್ರಾಯೇಲ್‌ ಮಕ್ಕಳು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷ ಇತ್ತು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 8

15ಏನಂದರೆ, ಬರೆದಿರುವ ಪ್ರಕಾರ ಗುಡಾರ ಹಾಕುವ ಹಾಗೆ ಬೆಟ್ಟಕ್ಕೆ ಹೋಗಿ ಇಪ್ಪೆಯ ಕೊಂಬೆಗಳನ್ನೂ ತೈಲಗಿಡದ ಕೊಂಬೆ ಗಳನ್ನೂ ಗಂಧದ ಗಿಡದ ಕೊಂಬೆಗಳನ್ನೂ ತಾಳೆಯ ಕೊಂಬೆಗಳನ್ನೂ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತಕ್ಕೊಂಡು ಬನ್ನಿರಿ ಎಂದು ತಮ್ಮ ಎಲ್ಲಾ ಪಟ್ಟಣಗಳ ಲ್ಲಿಯೂ ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು ಎಂಬದೇ.

16ಹಾಗೆಯೇ ಜನರು ಹೊರಟು ಹೋಗಿ ತಕ್ಕೊಂಡು ಬಂದು ಅವರವರು ತಮ್ಮ ಮನೆ ಗಳ ಮೇಲೆಯೂ ತಮ್ಮ ಅಂಗಳಗಳಲ್ಲಿಯೂ ದೇವರ ಮನೆಯ ಅಂಗಳಗಳಲ್ಲಿಯೂ ನೀರಿನ ಬಾಗಲ ಬೀದಿಯಲ್ಲಿಯೂ ಎಫ್ರಾಯಾಮಿನ ಬಾಗಲ ಬೀದಿಯ ಲ್ಲಿಯೂ ತಮಗೆ ಗುಡಾರಗಳನ್ನು ಹಾಕಿದರು.

17ಈ ಪ್ರಕಾರ ಸೆರೆಯಿಂದ ತಿರಿಗಿ ಬಂದ ಸಭೆಯವರೆಲ್ಲರೂ ಗುಡಾರಗಳನ್ನು ಹಾಕಿ ಗುಡಾರಗಳಲ್ಲಿ ವಾಸವಾಗಿದ್ದರು. ನೂನನ ಮಗನಾದ ಯೆಹೋಶುವನ ದಿನವು ಮೊದಲ ಗೊಂಡು ಆ ದಿವಸದ ವರೆಗೂ ಇಸ್ರಾಯೇಲ್‌ ಮಕ್ಕಳು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷ ಇತ್ತು.

18ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು.

ನೆಹೆಮಿಯ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी