ಆಗ ಕಾರೇಹನ ಮಗನಾದ ಯೋಹಾನಾನನೂ ತನ್ನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ತಾನು ನೆತನ್ಯನ ಮಗನಾದ ಇಷ್ಮಾಯೇಲನ ಕೈಯೊಳಗಿಂದ ಅವನು ಅಹೀಕಾಮನ ಮಗನಾದ ಗೆದಲ್ಯನನ್ನು ಕೊಂದುಹಾಕಿದ ತರುವಾಯ ತಪ್ಪಿಸಿಕೊಂಡ ಉಳಿದ ಜನರೆಲ್ಲರನ್ನು ಅಂದರೆ ಗಿಬ್ಯೋನಿ ನಿಂದ ತಾನು ತಿರುಗಿ ತಂದಿದ್ದ ಬಲಿಷ್ಠರಾದ ಯುದ್ಧದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಕಂಚುಕಿ ಯರನ್ನೂ ಮಿಚ್ಪದಿಂದ ಕರಕೊಂಡು ಹೊರಟು,
14ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ತಂದ ಜನರೆಲ್ಲರೂ ಕೂಡಿ ತಿರುಗಿಕೊಂಡು ಕಾರೇಹನ ಮಗ ನಾದ ಯೋಹಾನಾನನ ಬಳಿಗೆ ಬಂದರು.
15ಆದರೆ ನೆತನ್ಯನ ಮಗನಾದ ಇಷ್ಮಾಯೇಲನು ಎಂಟು ಮನುಷ್ಯರ ಸಂಗಡ ಯೋಹಾನಾನನಿಗೆ ತಪ್ಪಿಸಿಕೊಂಡು ಅಮ್ಮೋನ್ಯನ ಬಳಿಗೆ ಹೋದನು.
16ಆಗ ಕಾರೇಹನ ಮಗನಾದ ಯೋಹಾನಾನನೂ ತನ್ನ ಸಂಗಡ ಇದ್ದ ಸೈನ್ಯಾಧಿಪತಿಗಳೆಲ್ಲರೂ ತಾನು ನೆತನ್ಯನ ಮಗನಾದ ಇಷ್ಮಾಯೇಲನ ಕೈಯೊಳಗಿಂದ ಅವನು ಅಹೀಕಾಮನ ಮಗನಾದ ಗೆದಲ್ಯನನ್ನು ಕೊಂದುಹಾಕಿದ ತರುವಾಯ ತಪ್ಪಿಸಿಕೊಂಡ ಉಳಿದ ಜನರೆಲ್ಲರನ್ನು ಅಂದರೆ ಗಿಬ್ಯೋನಿ ನಿಂದ ತಾನು ತಿರುಗಿ ತಂದಿದ್ದ ಬಲಿಷ್ಠರಾದ ಯುದ್ಧದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಕಂಚುಕಿ ಯರನ್ನೂ ಮಿಚ್ಪದಿಂದ ಕರಕೊಂಡು ಹೊರಟು,
17ಐಗು ಪ್ತಕ್ಕೆ ಹೋಗುವದಕ್ಕೆ ಬೇತ್ಲೆಹೇಮಿನ ಬಳಿಯಲ್ಲಿರುವ ಕಿಮ್ಹಾಮನ ಛತ್ರದಲ್ಲಿ ಕಸ್ದೀಯರ ನಿಮಿತ್ತ ವಾಸ ಮಾಡಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ