ಇದಕ್ಕಾಗಿ ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಗೋಳಾಡಿರಿ; ಕರ್ತನ ಕೋಪದ ಉರಿಯು ನಮ್ಮಿಂದ ಹಿಂತಿರುಗಲಿಲ್ಲ.
6ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ಹಿಂದಕ್ಕೆ ಹೋಗಿರಿ, ನಿಲ್ಲಬೇಡಿರಿ; ನಾನು ಉತ್ತರದಿಂದ ಕೇಡನ್ನೂ ದೊಡ್ಡ ನಾಶನವನ್ನೂ ತರುತ್ತೇನೆ.
7ಸಿಂಹವು ತನ್ನ ಅಡವಿಯೊಳಗಿಂದ ಏರಿ ಬರುತ್ತದೆ, ಅನ್ಯ ಜನಾಂಗ ಗಳನ್ನು ನಾಶಮಾಡುವವನು ಹೊರಟಿದ್ದಾನೆ, ನಿನ್ನ ದೇಶವನ್ನು ಹಾಳು ಮಾಡುವದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ; ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವದು.
8ಇದಕ್ಕಾಗಿ ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಗೋಳಾಡಿರಿ; ಕರ್ತನ ಕೋಪದ ಉರಿಯು ನಮ್ಮಿಂದ ಹಿಂತಿರುಗಲಿಲ್ಲ.
9ಆ ದಿವಸದಲ್ಲಿ ಆಗುವದೇನಂದರೆ--ಅರಸನ ಹೃದಯವೂ ಸಾಮಂ ತರ ಹೃದಯವೂ ಹಾಳಾಗುವದು. ಯಾಜಕರು ಆಶ್ಚರ್ಯಪಡುವರು; ಪ್ರವಾದಿಗಳು ಭ್ರಮೆಗೊಳ್ಳು ವರು ಎಂದು ಕರ್ತನು ಅನ್ನುತ್ತಾನೆ.
10ಆಗ ನಾನು ಹೇಳಿದ್ದೇನಂದರೆ--ಹಾ! ಕರ್ತನೇ, ದೇವರೇ, ನಿಶ್ಚಯ ವಾಗಿ ನೀನು ಈ ಜನರಿಗೂ ಯೆರೂಸಲೇಮಿಗೂ-- ನಿಮಗೆ ಸಮಾಧಾನವಾಗುವದೆಂದು ಹೇಳಿ ಬಹಳ ಮೋಸಮಾಡಿದ್ದೀ; ಕತ್ತಿಯು ಪ್ರಾಣದ ವರೆಗೂ ತಾಕುತ್ತ ದಲ್ಲವೋ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ