೧ ಸಮುವೇಲನು 30:12

ಅವನಿಗೆ ನೀರನ್ನು ಕುಡಿಸಿ ಅಂಜೂರದ ಫಲದ ಅಡೆಯಲ್ಲಿ ಒಂದು ತುಂಡನ್ನೂ ಒಣಗಿದ ಎರಡು ದ್ರಾಕ್ಷೇ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದು ಪ್ರಾಣದಲ್ಲಿ ಚೇತರಿಸಿ ಕೊಂಡನು. ಯಾಕಂದರೆ ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 30

10ದಾವೀದನು, ತಾನೂ ನಾನೂರು ಜನರೂ ಹಿಂದಟ್ಟಿಹೋದರು. ಬೆಸೋರಿನ ಹಳ್ಳವನ್ನು ದಾಟಲಾರದೆ ದಣಿದಿದ್ದದರಿಂದ ಇನ್ನೂರು ಜನರು ಅಲ್ಲಿ ನಿಂತರು.

11ಅವರು ಒಬ್ಬ ಐಗುಪ್ತ್ಯನನ್ನು ಅಡವಿಯಲ್ಲಿ ಕಂಡುಕೊಂಡು ಅವನನ್ನು ದಾವೀದನ ಬಳಿಗೆ ತಂದು ಅವನಿಗೆ ರೊಟ್ಟಿಕೊಟ್ಟರು; ಅವನು ತಿಂದನು.

12ಅವನಿಗೆ ನೀರನ್ನು ಕುಡಿಸಿ ಅಂಜೂರದ ಫಲದ ಅಡೆಯಲ್ಲಿ ಒಂದು ತುಂಡನ್ನೂ ಒಣಗಿದ ಎರಡು ದ್ರಾಕ್ಷೇ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದು ಪ್ರಾಣದಲ್ಲಿ ಚೇತರಿಸಿ ಕೊಂಡನು. ಯಾಕಂದರೆ ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.

13ದಾವೀದನು ಅವನನ್ನು--ನೀನು ಯಾರವನು? ನೀನು ಎಲ್ಲಿಯವನು ಎಂದು ಕೇಳಿದಾಗ ಅವನು--ನಾನು ಒಬ್ಬ ಅಮಾಲೇಕ್ಯನ ಸೇವಕನಾದ ಐಗುಪ್ತದೇಶದ ಯೌವನಸ್ಥನು. ಈ ಮೂರು ದಿವಸ ನಾನು ರೋಗದಲ್ಲಿ ಬಿದ್ದದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.

14ಆದರೆ ನಾವು ಕೆರೇತ್ಯರ ದಕ್ಷಿಣ ಪಾರ್ಶ್ವದ ಮೇಲೆಯೂ ಯೆಹೂದದ ಮೇರೆಯ ಮೇಲೆಯೂ ಕಾಲೇಬನ ದಕ್ಷಿಣ ಪಾರ್ಶ್ವದ ಮೇಲೆ ಯೂ ಬಿದ್ದು ಚಿಕ್ಲಗನ್ನು ಬೆಂಕಿಯಿಂದ ಸುಟ್ಟುಬಿಟ್ಟೆವು ಅಂದನು.

೧ ಸಮುವೇಲನು 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी