ಧರ್ಮೋಪದೇಶಕಾಂಡ 21:16

ಅವನು ತನ್ನ ಕುಮಾರರಿಗೆ ತನಗೆ ಉಂಟಾದದ್ದನ್ನು ಸ್ವಾಸ್ತ್ಯವಾಗಿ ಕೊಡುವ ದಿವಸ ದಲ್ಲಿ ಚೊಚ್ಚಲಾಗಿರುವ ಹಗೆಮಾಡಲ್ಪಟ್ಟವಳ ಮಗನಿಗೆ ಬದಲಾಗಿ ಪ್ರೀತಿಮಾಡಲ್ಪಟ್ಟವಳ ಮಗನನ್ನು ಚೊಚ್ಚ ಲಾಗಿ ಮಾಡಕೂಡದು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 21

14ಆದರೆ ನೀನು ಅವಳನ್ನು ಮೆಚ್ಚದೆ ಹೋದರೆ ಅವಳನ್ನು ಅವಳ ಮನಸ್ಸಿದ್ದಲ್ಲಿಗೆ ಕಳುಹಿಸಿಬಿಡಬೇಕು; ಹೇಗಾದರೂ ಹಣಕ್ಕೆ ಮಾರಲೇಬಾರದು; ನೀನು ಅವಳನ್ನು ತಗ್ಗಿಸಿದ್ದರಿಂದ ಅವಳನ್ನು ದಾಸಿಯ ಹಾಗೆ ನಡಿಸಬಾರದು.

15ಒಬ್ಬ ಮನುಷ್ಯನಿಗೆ ಪ್ರೀತಿಮಾಡಲ್ಪಟ್ಟ ಒಬ್ಬಳೂ ಹಗೆಮಾಡಲ್ಪಟ್ಟ ಒಬ್ಬಳೂ ಇಬ್ಬರು ಪತ್ನಿಯರು ಇರ ಲಾಗಿ ಪ್ರೀತಿಮಾಡಲ್ಪಟ್ಟವಳೂ ಹಗೆಮಾಡಲ್ಪಟ್ಟವಳೂ ಅವನಿಗೆ ಮಕ್ಕಳನ್ನು ಹೆತ್ತಿರುವಲ್ಲಿ ಹಗೆಮಾಡಲ್ಪಟ್ಟವಳ ಮಗನು ಚೊಚ್ಚಲಾಗಿದ್ದರೆ

16ಅವನು ತನ್ನ ಕುಮಾರರಿಗೆ ತನಗೆ ಉಂಟಾದದ್ದನ್ನು ಸ್ವಾಸ್ತ್ಯವಾಗಿ ಕೊಡುವ ದಿವಸ ದಲ್ಲಿ ಚೊಚ್ಚಲಾಗಿರುವ ಹಗೆಮಾಡಲ್ಪಟ್ಟವಳ ಮಗನಿಗೆ ಬದಲಾಗಿ ಪ್ರೀತಿಮಾಡಲ್ಪಟ್ಟವಳ ಮಗನನ್ನು ಚೊಚ್ಚ ಲಾಗಿ ಮಾಡಕೂಡದು.

17ಅವನು ಹಗೆ ಮಾಡಲ್ಪಟ್ಟ ವಳ ಮಗನಿಗೆ ತನ್ನ ಬಳಿಯಲ್ಲಿ ಉಂಟಾದ ಎಲ್ಲವುಗಳಲ್ಲಿ ಎರಡು ಪಾಲುಗಳನ್ನು ಕೊಟ್ಟು ಅವನೇ ಚೊಚ್ಚಲನೆಂದು ಒಪ್ಪಿಕೊಳ್ಳಬೇಕು. ಯಾಕಂದರೆ ಅವನೇ ಅವನ ಬಲದ ಆರಂಭವು; ಅವನಿಗೆ ಚೊಚ್ಚಲತನದ ಹಕ್ಕು ಉಂಟು.

18ಒಬ್ಬ ಮನುಷ್ಯನಿಗೆ ಮೊಂಡನೂ ತಿರುಗಿ ಬೀಳುವ ವನೂ ಆಗಿರುವ ಮಗನಿದ್ದರೆ ಅವನು ತಂದೆಯ ಮಾತನ್ನು ತಾಯಿಯ ಮಾತನ್ನು ಕೇಳದೆಯೂ, ಅವರು ಅವನನ್ನು ಶಿಕ್ಷಿಸಿ ಹೇಳುವ ಮಾತನ್ನೂ ಕೇಳದೆಯೂ ಹೋದರೆ

ಧರ್ಮೋಪದೇಶಕಾಂಡ 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी