ಅವನು ಮಾಡಿದ ಅಪರಾಧಗಳೆಲ್ಲಾ ಅವನಿಗೆ ವಿರುದ್ದವಾಗಿ ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು.
20ಪಾಪ ಮಾಡುವ ಪ್ರಾಣವು ತಾನಾಗಿ ಸಾಯುವದು; ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲ. ತಂದೆಯು ಮಗನ ಅಕ್ರಮವನ್ನು ಹೊರುವದಿಲ್ಲ. ನೀತಿವಂತನ ನೀತಿಯು ಅವನ ಮೇಲೆಯೇ ಇರುವದು. ದುಷ್ಟನ ದುಷ್ಟತ್ವವು ಅವನ ಮೇಲೆಯೇ ಇರುವದು.
21ಆದರೆ ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನ್ಯಾಯವನ್ನೂ ನೀತಿಯನ್ನೂ ನಡೆಸಿದರೆ ಅವನು ಸಾಯದೆ ನಿಶ್ಚಯವಾಗಿ ಬದುಕುವನು.
22ಅವನು ಮಾಡಿದ ಅಪರಾಧಗಳೆಲ್ಲಾ ಅವನಿಗೆ ವಿರುದ್ದವಾಗಿ ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು.
23ದುಷ್ಟನು ಸಾಯುವದರಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿ ರುವದೋ ಎಂದು ದೇವರಾದ ಕರ್ತನು ಹೇಳುತ್ತಾನೆ; ಅವನು ತನ್ನ ನಡತೆಗಳಿಂದ ಹಿಂತಿರುಗಿಕೊಂಡು ಬದು ಕಿದರೆ ನನಗೆ ಸಂತೋಷವಲ್ಲವೇ?
24ಆದರೆ ನೀತಿ ವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿ ರುವ ಎಲ್ಲಾ ನೀತಿಯು ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿರುವ ಅಪರಾಧದಿಂದಲೂ ಪಾಪ ದಿಂದಲೂ ಅವುಗಳಲ್ಲಿ ಸಾಯುವನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ