ಪ್ರಕಟನೆ 12:6

ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು; ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದನು.

ಸಂದರ್ಭದೊಂದಿಗೆ ಓದಿ · ಪ್ರಕಟನೆ 12

4ಅದರ ಬಾಲವು ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರ ಲ್ಲೊಂದು ಭಾಗವನ್ನು ಎಳೆದು ಭೂಮಿಗೆ ಹಾಕಿತು. ಹೆರುವದಕ್ಕೆ ಸಿದ್ಧವಾಗಿದ್ದ ಆ ಸ್ತ್ರೀಯು ಹೆತ್ತಕೂಡಲೆ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟ ಸರ್ಪವು ಅವಳ ಮುಂದೆ ನಿಂತುಕೊಂಡಿತ್ತು.

5ಆಕೆ ಜನಾಂಗಗಳನ್ನೆಲ್ಲಾ ಕಬ್ಬಿಣದ ಕೋಲಿನಿಂದ ಆಳ ಬೇಕಾಗಿದ್ದ ಒಂದು ಗಂಡು ಮಗುವನ್ನು ಹೆತ್ತಳು; ಆ ಕೂಸು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು.

6ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು; ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದನು.

7ಇದಲ್ಲದೆ ಪರಲೋಕದಲ್ಲಿ ಯುದ್ಧ ನಡೆಯಿತು. ವಿಾಕಾಯೇಲನೂ ಅವನ ದೂತರೂ ಘಟಸರ್ಪಕ್ಕೆ ವಿರೋಧವಾಗಿ ಯುದ್ಧಮಾಡಿದರು; ಘಟಸರ್ಪನೂ ಅವನ ದೂತರೂ ಯುದ್ದಮಾಡಿ ಸೋತು ಹೋದರು.

8ಆಗ ಪರಲೋಕದಲ್ಲಿ ಅವರಿಗೆ ಸ್ಥಾನವು ಇನ್ನೆಂದಿಗೂ ಇಲ್ಲದೆ ಹೋಯಿತು.

ಪ್ರಕಟನೆ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी