ಯಾಜಕಕಾಂಡ 18:27

(ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲ ಅಸಹ್ಯವಾದವುಗಳನ್ನು ಮಾಡಿದರು, ಮತ್ತು ದೇಶವೂ ಹೊಲೆಯಾಯಿತು;)

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 18

25ದೇಶವೂ ಹೊಲೆಯಾಗಿದೆ. ಆದದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು, ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವದು.

26ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು.

27(ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲ ಅಸಹ್ಯವಾದವುಗಳನ್ನು ಮಾಡಿದರು, ಮತ್ತು ದೇಶವೂ ಹೊಲೆಯಾಯಿತು;)

28ನೀವೂ ಅದನ್ನು ಅಶುದ್ಧಮಾಡಿದರೆ ಅದು ನಿಮ್ಮ ಮುಂದಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವದು.

29ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವ ದನ್ನಾದರೂ ಮಾಡಿದರೆ ಅವುಗಳನ್ನು ಮಾಡುವ ಮನುಷ್ಯರನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.

ಯಾಜಕಕಾಂಡ 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी