ನಾನು ನನ್ನ ಕಣ್ಣುಗಳನ್ನು ಎತ್ತಿದಾಗ ಇಗೋ, ನಾಲ್ಕು ಕೊಂಬುಗಳನ್ನು ನೋಡಿದೆನು.
16ಆದದರಿಂದ ಕರ್ತನು ಹೀಗೆ ಹೇಳುತ್ತಾನೆ --ನಾನು ಕನಿಕರದಿಂದ ಯೆರೂಸಲೇಮಿನ ಕಡೆಗೆ ತಿರುಗಿಕೊಂಡಿದ್ದೇನೆ; ನನ್ನ ಆಲಯವು ಅದರಲ್ಲಿ ಕಟ್ಟ ಲ್ಪಡುವದೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಯೆರೂ ಸಲೇಮಿನ ಮೇಲೆ ಅಳತೆ ನೂಲು ಚಾಚಲ್ಪಡುವದು.
17ಇನ್ನೂ ಕೂಗಿ ಹೇಳು, ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವವು; ಕರ್ತನು ಚೀಯೋನನ್ನು ಇನ್ನು ಆದರಿಸುವನು; ಯೆರೂಸಲೇಮನ್ನು ಇನ್ನು ಆದುಕೊಳ್ಳುವನು.
18ನಾನು ನನ್ನ ಕಣ್ಣುಗಳನ್ನು ಎತ್ತಿದಾಗ ಇಗೋ, ನಾಲ್ಕು ಕೊಂಬುಗಳನ್ನು ನೋಡಿದೆನು.
19ಆಗ ನನ್ನ ಕೂಡ ಮಾತನಾಡಿದ ದೂತನಿಗೆ ನಾನು--ಇದೇನು ಅಂದೆನು. ಅದಕ್ಕೆ ಅವನು ನನಗೆ ಉತ್ತರಕೊಟ್ಟು--ಇವು ಯೆಹೂದವನ್ನೂ ಇಸ್ರಾಯೇಲನ್ನೂ ಯೆರೂಸ ಲೇಮನ್ನೂ ಚದರಿಸಿದ ಕೊಂಬುಗಳು ಅಂದನು.
20ಆಗ ಕರ್ತನು ನನಗೆ ನಾಲ್ಕು ಬಡಗಿಯವರನ್ನು ತೋರಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ