ಯೆಹೆಜ್ಕೇಲನು 27:4

ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ, ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯ ವನ್ನು ಸಂಪೂರ್ಣಪಡಿಸಿದ್ದಾರೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 27

2ಮನುಷ್ಯಪುತ್ರನೇ, ಈಗ ತೂರಿನ ಬಗ್ಗೆ ನೀನು ಗೋಳಾಟವನ್ನೆತ್ತು;

3ತೂರಿಗೆ ಹೇಳು--ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳಿಗೆ ಜನರ ವ್ಯಾಪಾರವನ್ನು ನಡಿಸುವ ವಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಓ ತೂರೇ, ನಾನು ಪೂರ್ಣ ಸೌಂದರ್ಯವಂತಳೆಂದು ನೀನು ಹೇಳಿದ್ದೀ.

4ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ, ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯ ವನ್ನು ಸಂಪೂರ್ಣಪಡಿಸಿದ್ದಾರೆ.

5ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿ ದ್ದಾರೆ, ನಿನಗೆ ಪಠಸ್ತಂಭಗಳನ್ನು ಮಾಡುವದಕ್ಕೆ ಲೆಬ ನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.

6ನಿನ್ನ ಹುಟ್ಟು ಗೋಲನ್ನು ಬಾಷಾನಿನ ಓಕ್‌ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಯರ ದ್ವೀಪಗಳಿಂದ ತಂದ ದಂತದ ಹಲಗೆಗಳಿಂದ ಅಶ್ಶೂರ್ಯರ ಗುಂಪಿನವರು ಕೆತ್ತಿದ್ದಾರೆ.

ಯೆಹೆಜ್ಕೇಲನು 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी