ಮಾರ್ಕನು 7:25

ಯಾಕಂದರೆ ಒಬ್ಬ ಸ್ತ್ರೀಯು ಆತನ ವಿಷಯವಾಗಿ ಕೇಳಿ ಅಲ್ಲಿಗೆ ಬಂದು ಆತನ ಪಾದಗಳಿಗೆ ಬಿದ್ದಳು. ಯಾಕಂದರೆ ಆಕೆಯ ಮಗಳಿಗೆ ಅಶುದ್ಧಾತ್ಮ ಹಿಡಿದಿತ್ತು.

ಸಂದರ್ಭದೊಂದಿಗೆ ಓದಿ · ಮಾರ್ಕನು 7

23ಈ ಎಲ್ಲಾ ಕೆಟ್ಟವುಗಳು ಒಳಗಿನಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ ಅಂದನು.

24ಅಲ್ಲಿಂದ ಆತನು ಎದ್ದು ತೂರ್‌ ಸೀದೋನ್‌ ಮೇರೆಗಳಿಗೆ ಹೋಗಿ ಒಂದು ಮನೆಯೊಳಗೆ ಬಂದನು. ಮತ್ತು ಅದು ಯಾರಿಗೂ ಗೊತ್ತಾಗಬಾರದೆಂದು ಆತನು ಇಷ್ಟಪಟ್ಟನು; ಆದರೆ ಆತನು ಮರೆಯಾಗಿರಲಾರದೆ ಹೋದನು.

25ಯಾಕಂದರೆ ಒಬ್ಬ ಸ್ತ್ರೀಯು ಆತನ ವಿಷಯವಾಗಿ ಕೇಳಿ ಅಲ್ಲಿಗೆ ಬಂದು ಆತನ ಪಾದಗಳಿಗೆ ಬಿದ್ದಳು. ಯಾಕಂದರೆ ಆಕೆಯ ಮಗಳಿಗೆ ಅಶುದ್ಧಾತ್ಮ ಹಿಡಿದಿತ್ತು.

26ಆ ಸ್ತ್ರೀಯು ಸುರೋಪೊಯಿನಿಕ ಜನಾಂ ಗದವಳಾದ ಒಬ್ಬ ಗ್ರೀಕಳು. ಆಕೆಯು ತನ್ನ ಮಗಳನ್ನು ಹಿಡಿದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿ ಕೊಂಡಳು.

27ಆದರೆ ಯೇಸು ಆಕೆಗೆ--ಮಕ್ಕಳಿಗೆ ಮೊದಲು ತೃಪ್ತಿಯಾಗಲಿ; ಯಾಕಂದರೆ ಮಕ್ಕಳ ರೊಟ್ಟಿ ಯನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿದನು.

ಮಾರ್ಕನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी