ಈತನು ದೂತರಿಗಿಂತಲೂ ಉತ್ತಮನಾಗಿ ಮಾಡ ಲ್ಪಟ್ಟು ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನಲ್ಲಾ;
2ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ತನ್ನ ಮಗನ ಮುಖಾಂತರ ಮಾತನಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು, ಈತನ ಮೂಲಕವೇ ಲೋಕಗಳನ್ನು ಉಂಟು ಮಾಡಿದನು.
3ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
4ಈತನು ದೂತರಿಗಿಂತಲೂ ಉತ್ತಮನಾಗಿ ಮಾಡ ಲ್ಪಟ್ಟು ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನಲ್ಲಾ;
5ಹೇಗೆಂದರೆ--ನೀನು ನನ್ನ ಮಗನು; ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ ಎಂತಲೂ ತಿರಿಗಿ--ನಾನು ಅವನಿಗೆ ತಂದೆಯಾಗಿ ರುವೆನು; ಅವನು ನನಗೆ ಮಗನಾಗಿರುವನು ಎಂತಲೂ ಆತನು ತನ್ನ ದೂತರೊಳಗೆ ಯಾರಿಗಾದರೂ ಎಂದಾ ದರೂ ಹೇಳಿದ್ದುಂಟೋ?
6ಇದಲ್ಲದೆ ದೇವರು ಮೊದಲು ಹುಟ್ಟಿದಾತನನ್ನು ಲೋಕದೊಳಗೆ ಬರ ಮಾಡುವಾಗ--ದೇವದೂತರೆಲ್ಲರೂ ಆತನನ್ನು ಆರಾಧಿಸಲಿ ಎಂದು ಹೇಳುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ